Karada Vishwa

Event · April 30, 2025

ಕರಾಡ ಬ್ರಾಹ್ಮಣ ಸಮಾಜ ಮಂಗಳೂರು , ಯೂತ್ ಕರಾಡ ಮಂಗಳೂರು ಹಾಗೂ KMC ಆಶ್ರಯದಲ್ಲಿ ರಕ್ತದಾನ ಶಿಬಿರ

ಮೇ 1, 2025 ರಂದು ಶಕ್ತಿನಗರದ ನಾಲ್ಯಪದವು ಶಾಲೆಯಲ್ಲಿ ರಕ್ತದಾನ ಶಿಬಿರ

ಕರಾಡ ಸಮಾಜ ಬಾಂಧವರಿಗೆ ನಮನಗಳು.

ನಮ್ಮ ಸಮಾಜದಲ್ಲಿ ಆರೋಗ್ಯ ಸಮಸ್ಯೆಯ ಚಿಕಿತ್ಸೆಗಾಗಿ ಮಂಗಳೂರನ್ನು ಆಶ್ರಯಿಸುವವರು ತುಂಬಾ ಮಂದಿ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಬಂದಾಗ ಪರದಾಡುವುದನ್ನು ನಾವು ಕಂಡಿದ್ದೇವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಯೂತ್ ಕರಾಡ ಮಂಗಳೂರು ರಕ್ತದಾನ ಶಿಭಿರವನ್ನು ಹಮ್ಮಿಕೊಂಡಿರುವುದು ನಿಮಗೆಲ್ಲ ತಿಳಿದಿದೆ. ಇದರಲ್ಲಿ ಸಂಗ್ರಹವಾದ ರಕ್ತವು ನಮ್ಮ ಸಮಾಜದ ಬಾಂಧವರಿಗೆ ಅಗತ್ಯದ ಸಮಯದಲ್ಲಿ ಪೂರೈಸುವುದಾಗಿ ಕೆಎಂಸಿ ಆಸ್ಪತ್ರೆಯು ಭರವಸೆಯನ್ನು ನೀಡಿರುತ್ತದೆ.

ಈ ಸದುದ್ದೇಶವನ್ನು ಪೂರ್ಣಗೊಳಿಸಲು ಎಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.

ಮೇ 1 2025 ರಂದು ಶಕ್ತಿನಗರದ ನಾಲ್ಯಪದವು ಶಾಲೆಯಲ್ಲಿ ನಡೆಯುವ ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕಾಗಿ ಅಪೇಕ್ಷೆ.

ಕರಾಡ ಬ್ರಾಹ್ಮಣ ಸಮಾಜ ಮಂಗಳೂರು , ಯೂತ್ ಕರಾಡ ಮಂಗಳೂರು ಹಾಗೂ KMC ಆಶ್ರಯದಲ್ಲಿ ರಕ್ತದಾನ ಶಿಬಿರ