
News · July 22, 2025
ಕರಾಡ ಸಮುದಾಯದ ಅಧ್ಯಯನ ತುಳು ಸಂಪ್ರಬಂಧ ಮಂಡನೆ
ಪ್ರವೀಣ ಪಿ.ಬಿ ಅವರಿಗೆ ಅಭಿನಂದನೆಗಳು..!
ಪ್ರವೀಣ ಪಿ.ಬಿ ಅವರು ಪೆರಿಕ್ಕಾನ ಮನೆ, ಪಡ್ರೆ ಮೂಲದವರು; ಇವರು ಬೆಂಗಳೂರಿನ ಸರ್ಕಾರಿ ತಾಂತ್ರಿಕ ಕಾಲೇಜಿನಲ್ಲಿ ತಾಂತ್ರಿಕ ಡಿಪ್ಲೋಮಾ ಪಡೆದಿದ್ದು, ಮೈಸೂರು ವಿಶ್ವವಿದ್ಯಾನಿಲಯದಿಂದ ಕಲಾ, ವಿಜ್ಞಾನ, ಎಂ.ಕಾಂ ಹಾಗೂ ಎಂ.ಎ (ಕನ್ನಡ) ಪದವಿಗಳನ್ನು ಪಡೆದಿದ್ದಾರೆ, ಬಿ.ಎಡ್ ಪದವಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ, ಹಾಗೂ ತುಳು ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಂಧ್ಯಾ ಕಾರ್ಯಕ್ರಮದಿಂದ ಮುಗಿಸಿದ್ದಾರೆ; ಕಂಪ್ಯೂಟರ್ ಶಿಕ್ಷಣವನ್ನು ಸುರತ್ಕಲ್‌ನ NITK STEP ನಿಂದ ಪಡೆದ ಇವರು ಪ್ರಸ್ತುತ ವಿಜ್ಞಾನ ಮಾದರಿ ವಿನ್ಯಾಸಗಾರರಾಗಿ ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಾಜೆಕ್ಟ್ ವರ್ಕ್ ಹಾಗೂ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರವೀಣ ಅವರು ಮಂಗಳೂರು ವಿವಿಯ ಸಂಧ್ಯಾ ಕಾಲೇಜು ತುಳು ಅಧ್ಯಯನ ಕೇಂದ್ರದಲ್ಲಿ "ತುಳುನಾಡ್ದ ಕರಾಡ ಬ್ರಾಣೆರ್ನಕ್ಲೆನ ಸಮುದಾಯೊದ ಸಾಂಸ್ಕೃತಿಕ ಅಧ್ಯಯನೊ " ಎಂಬ ವಿಷಯದಲ್ಲಿ ಸಂಪ್ರಬಂಧ ಮಂಡಿಸಿದರು . ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು.




