
News · August 28, 2025
ಕರಾಡ ಭಜನಾ ಸಂಜೆ
-ಯುವ ಕರಾಡ ಬಳಗ
ಯುವ ಕರಾಡ ನಡೆಸಿಕೊಡುವ 25 ನೇ ಕರಾಡ ಭಜನಾ ಸಂಜೆ ಕಾರ್ಯಕ್ರಮ 24.08.2025 ರಂದು ಶ್ರೀ ಸುಬ್ರಹ್ಮಣ್ಯ ಭಟ್ ಕುದ್ಕುಳಿ ಇವರ ಮನೆಯಲ್ಲಿ ನೆರವೇರಿತು.
ಸುಮಾರು 45 ಕರಾಡ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ದೀಪಜ್ಯೋತಿಯೊಂದಿಗೆ ಮೊದಲ್ಗೊಂಡು, ವಿಷ್ಣು ಸಹಸ್ರನಾಮ, ಭಜನೆ, ಮತ್ತು ಶಾಂತಿ ಮಂತ್ರದೊಂದಿಗೆ ಕೊನೆಗೊಂಡಿತು.
ಅವಕಾಶ ಮಾಡಿಕೊಟ್ಟ ಶ್ರೀ ಸುಬ್ರಹ್ಮಣ್ಯ ಭಟ್ ಕುದ್ಕುಳಿ ಮತ್ತು ಅವರ ಕುಟುಂಬದವರಿಗೆ ಮತ್ತು ಆಸಕ್ತಿಯಿಂದ ಭಾಗವಹಿಸಿದ ಎಲ್ಲಾ ಕರಾಡ ಬಾಂಧವರಿಗೂ ಧನ್ಯವಾದಗಳು.
ಮುಂದಿನ ದಿನಗಳಲ್ಲಿ ಇನ್ನಷ್ಟು ಕರಾಡ ಕುಟುಂಬಗಳನ್ನು ಸಂಪರ್ಕಿಸೋಣ ಮತ್ತು ಇಂತಹ ಭಜನಾ ಸಂಜೆಗಳು ಬೆಂಗಳೂರಿನ ವಿವಿಧ ಕಡೆಗಳಲ್ಲಿ ನಡೆಯಲಿ, ಕರಾಡ ಕುಟುಂಬ ಮಿಲನಗಳು ನಿರಂತರತೆಯನ್ನು ಕಾಣಲಿ ಎಂಬ ಆಶಯದೊಂದಿಗೆ....
ಇದು ನಮ್ಮ ಸಮಾಜ, ನಮ್ಮ ಸಂಸ್ಕೃತಿ, ಮತ್ತು ನಮ್ಮ ಸಂಘಟನೆ ಎಂಬ ಸಂಕಲ್ಪ ಸಾಕಾರಗೊಳಿಸುವ ಪ್ರಯತ್ನಕ್ಕೆ ಕೈ ಜೋಡಿಸೋಣ ...ಯುವ ಕರಾಡ ಬಳಗ🙏
