Karada Vishwa

Article · April 20, 2026

ಅವತರಣ ಕ್ರೀಡೋತ್ಸವ

- ಸಂಧ್ಯಾ ಕೊರೆಕ್ಕಾನ

ನಡು ನೆತ್ತಿ ರವಿ ಹೊತ್ತಿ 
ಕೆಂಡದಂತೆ ಉರಿದರು
ಗೆಲುವೊಂದು ನಮ್ಮಗುರಿ 
ಆಟವಾಡಲು ಬಂದರು 

ಚಿಣ್ಣರೆಲ್ಲ ಬಣ್ಣಬಳಿದ 
ಕೆಂಪು ಮೊಗದ ಅಂದದಿ 
ಬೆವರ ಸಾಲು ಇಳಿಯುತ್ತಿತ್ತು
ಪುಟ್ಟ ಪುಟ್ಟ ವದನದಿ 

ಒಲೆಯ ಉರಿಸದಂತ ಅಡಿಗೆ 
ಸ್ಪೂರ್ತಿ ತಂದ ಸ್ಪರ್ಧೆಯು 
ಹುರುಪಿನಿಂದ ಭಕ್ಷ್ಯಹಲವು 
ತಂದ ಜಯದ ಮಾಲೆಯು

ತಂಡ ಕಟ್ಟಿ ದೂರದೂರಿನಿಂದ 
ಬಂದ ನಾರಿ ಫುರುಷರ 
ಆಟಕೆಂದು ಪ್ರಾಯ ಅಡ್ಡಿ 
ಆಗದದುವು ಎಂದರ

ಷಷ್ಠಿ ಕಳೆದ ಹಿರಿಯರಲ್ಲು 
ಬತ್ತದಂಥ ಚಿಲಮೆಯು 
ಹುರುಪಿನಿಂದ ನಡಿಗೆ 
ಯಲ್ಲಿ ಬಂದು ಸೇರಿಕೊಂಡರು

ವಲಯವಾರು ಶಕ್ತಿ ತೋರಿ
ಬಹುಮಾನದ ಗೊಂಚಲು 
ಮಂಗಳೂರು, ಅಗಲ್ಪಾಡಿ 
ಅವೆರಡನು ಹಂಚಲು 

ಯುವ ಕರಾಡ ಮಂಗಳೂರು
ಇವರವಿರತ ಶ್ರಮದಿ 
ಅವತರಣ ಇಪ್ಪತ್ತಾರು 
ಮುಗಿಯಿತು ಸಂತಸದಿ 


Creative Writings
ಅವತರಣ ಕ್ರೀಡೋತ್ಸವ