Karada Vishwa

News · October 30, 2026

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕುಂಟಿಕ್ಕಾನದಲ್ಲಿ ನವರಾತ್ರಿ ಮಹೋತ್ಸವ

ವರದಿ ಕೃಪೆ : ರವಿಕಿರಣ ಕುಂಟಿಕ್ಕಾನ

ಕುಂಟಿಕ್ಕಾನದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನವರಾತ್ರಿ ಮಹೋತ್ಸವವು ಭಕ್ತಿಭಾವದಿಂದ ನೆರವೇರಿತು.

ಮಹೋತ್ಸವದ ಹನ್ನೊಂದು ದಿನಗಳ ಕಾಲ ಪ್ರತಿದಿನ ಅನ್ನದಾನ ನಡೆಯಿತು. ದುರ್ಗಾ ಸಪ್ತಶತಿ, ಪವಮಾನ ಹಾಗೂ ರುದ್ರ ಪಾರಾಯಣಗಳು ಧಾರ್ಮಿಕ ಶ್ರದ್ಧೆಯಿಂದ ಜರುಗಿದವು. ಅಕ್ಟೋಬರ್ 19ರಂದು ತುಲಾಭಾರ ಸೇವೆ, 20ರಂದು ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ 21ರಂದು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 21ರ ರಾತ್ರಿ ವಿಶೇಷ ದೀಪಾರಾಧನೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಂಡಿತು.

ಭಕ್ತರ ಪಾಲ್ಗೊಳ್ಳುವಿಕೆಯಿಂದ ನವರಾತ್ರಿ ಮಹೋತ್ಸವವು ಶ್ರದ್ಧೆ ಹಾಗೂ ಭಕ್ತಿಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

Temples