Karada Vishwa

News · September 1, 2025

ಶ್ರೀ  ಗೋವಿಂದ ಪ್ರಕಾಶ ಭಟ್ ಕನ್ನಡಗುಳಿ  ಇವರಿಗೆ "ವೇದ ಶಾರದಾ " ಪ್ರಶಸ್ತಿ

ಶ್ರೀ ವೇದನಾದ ಗುರುಕುಲವನ್ನು ಸ್ಥಾಪಿಸಿ, ಋಗ್ವೇದ, ಸಂಸ್ಕೃತ, ಪುರಾಣಗಳು ಮತ್ತು ಸನಾತನ ಧರ್ಮದ ಬೋಧನೆಯಲ್ಲಿ ತೊಡಗಿರುವುದರ ಜೊತೆಗೆ, ಅವರು ಪರಿಣತ ಕರ್ಣಾಟಕ ಸಂಗೀತಗಾರರಾಗಿಯೂ ಖ್ಯಾತಿ ಪಡೆದಿದ್ದಾರೆ. “ವೇದ-ನಾದ” ಪರಂಪರೆಯನ್ನು ಒಗ್ಗೂಡಿಸಿದ ಅಪರೂಪದ ವ್ಯಕ್ತಿತ್ವ ಎಂದು ಎಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ.

ಶ್ರೀ  ಗೋವಿಂದ ಪ್ರಕಾಶ ಭಟ್ ಕನ್ನಡಗುಳಿ  ಅವರು ವೇದಪಂಡಿತರಾಗಿದ್ದು, ಬಾಲ್ಯದಿಂದಲೇ ವೇದಾಭ್ಯಾಸವನ್ನು ಆಳವಾಗಿ ಅಭ್ಯಸಿಸಿದ್ದಾರೆ. ಶ್ರೀ ವೇದನಾದ ಗುರುಕುಲವನ್ನು ಸ್ಥಾಪಿಸಿ, ಋಗ್ವೇದ, ಸಂಸ್ಕೃತ, ಪುರಾಣಗಳು ಮತ್ತು ಸನಾತನ ಧರ್ಮದ ಬೋಧನೆಯಲ್ಲಿ ತೊಡಗಿರುವುದರ ಜೊತೆಗೆ, ಅವರು ಪರಿಣತ ಕರ್ಣಾಟಕ ಸಂಗೀತಗಾರರಾಗಿಯೂ ಖ್ಯಾತಿ ಪಡೆದಿದ್ದಾರೆ. “ವೇದ-ನಾದ” ಪರಂಪರೆಯನ್ನು ಒಗ್ಗೂಡಿಸಿದ ಅಪರೂಪದ ವ್ಯಕ್ತಿತ್ವ ಎಂದು ಎಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ. ಶ್ರೀಯುತರಿಗೆ ದಿವ್ಯಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ಪೀಠಾರೋಹಣದ ರಜತಮಹೋತ್ಸವ ವರ್ಷದ ಪ್ರಯುಕ್ತ ನಡೆದ 'ಶ್ರೀ ಶಾರದಾರಾಧನಮ್ ' ಸಮಾರಂಭದಲ್ಲಿ "ವೇದ ಶಾರದಾ " ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ .  ಇವರಿಗೆ  ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು . 

ಶ್ರೀ  ಗೋವಿಂದ ಪ್ರಕಾಶ ಭಟ್ ಕನ್ನಡಗುಳಿ  ಇವರಿಗೆ "ವೇದ ಶಾರದಾ " ಪ್ರಶಸ್ತಿ