
Article · November 22, 2026
ಚುಟುಕುಗಳು
By ರಾಧಾಕೃಷ್ಣ ಭಟ್ ಕುರುಮುಜ್ಜಿ
ರಾಧಾಕೃಷ್ಣ ಭಟ್ ಕುರುಮುಜ್ಜಿ
೧.ಅವಳ ಆಜ್ಞೆ ನನಗದು ಅನುಜ್ಞೆ ೨. ಫಲಜ್ಯೋತಿಷ್ಯಕ್ಕೆ ನಿಮಿತ್ತ ಸ್ಥಳ ಪ್ರಶ್ನೆಯಲ್ಲಿ ಜೋಯಿಸರಿಗೆ ಕಾಣಿಸುವ ಸಣ್ಣವಸ್ತು ೩. ಬಾಯಿ ಬಡುಕ ಸಣ್ಣವನಾದರೂ ಮಾತುದೊಡ್ಡದು
ಆಜ್ಞೆ-ಅನುಜ್ಞೆ
ಮನೆಯ ಮುಂಭಾಗದಲ್ಲಿ ಸಿಟ್ಟೌಟ್
ಗುಡಿಸುವಾಗ ನೆಲ ಒರೆಸುವಾಗ
ಒಳಗೆ ಕುಳಿತಿದ್ದರೆ ಆಜ್ಞೆ ನನಗೆ ಆಗ
ಇಲ್ಲಿ ನನಗೆ ಕೆಲಸವಿದೆ you sit-out
ಏಳದಿದ್ದರೆ ಆಗ ಅವಳ ಸಿಟ್ಟು out
ಅವಳ ಆಜ್ಞೆ ನನಗದು ಅನುಜ್ಞೆ
ನಿಮಿತ್ತ
ಸ್ಥಳ ಪ್ರಶ್ನೆಯ ಸ್ಥಳದಲ್ಲಿ ಕಾಣಿಸುವ
ಸಣ್ಣದಾದರೂ ಒಂದು ತುಂಡು ಸರಿಗೆ
ಫಲಹೇಳಲು ಅನುಕೂಲವಾಗುವ
ನಿಮಿತ್ತದ ವಸ್ತುವದು ಜೊಯಿಸರಿಗೆ
ಸಭೆ ಸಾಲದು?
ಅಧಿಕ ಸಂಖ್ಯೆಯಲ್ಲಿ ಜನರು ಬಂದು ಸೇರಿದ್ದ
ಯಕ್ಷಗಾನದ ಪ್ರಸಿದ್ಧ ಕಲಾವಿದರ ಕೂಟವದು
ಬಾಯಿಬಡುಕ ಗುಂಡನೂ ಅಲ್ಲಿಗೆ ಬಂದಿದ್ದ
ಕಲಾವಿದರ ಮಾತಿಗೆ ಅವನ ವಿಮರ್ಶೆ ಆಲಿಸಿದ
ಕಲಾವಿದರೊಬ್ಬರು ಅವನನ್ನು ಕರೆದು ಕೇಳಿದ್ದು
ನೀವು ಅರ್ಥ ಹೇಳ್ತೀರಾ?ಗುಂಡನೆಂದ ಸಭೆಸಾಲದು
Creative Writings
