Karada Vishwa

Article · June 28, 2026

ಹ(ರ)ರಿ ಕಾಯುವ!

✍🏼 ರವೀ ಸಜಂಗದ್ದೆ

ಹುಟ್ಟು ಸಾವಿನ ನಡುವೆ

ಸವಿಯೋಣ ಬದುಕು |

ವ್ಯಥೆ ಪಡದೆ ಸಾಗುತಿರಲಿ

ಕಾಯದೆ ಯಾವುದಕೂ! ||

ಕಷ್ಟ-ಸುಖ, ದುಃಖ-ಸಂತಸ

ಸಮನಾಗಿ ಸ್ವೀಕರಿಸು |

ಕಾಯಲು ಮೇಲಿರುವನೊಬ್ಬ -

ನಮ್ಮೆಲ್ಲರ ಹ(ಅ)ರಸು! ||

Creative Writings
ಹ(ರ)ರಿ ಕಾಯುವ!