Karada Vishwa

News · May 17, 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಪ್ರಕಟಣೆ

ಭಗವದ್ಭಕ್ತರೇ,

 ಪರಾಭವ  ನಾಮ ಸಂವತ್ಸರದ ವೃಷಭ ಮಾಸದ 17ರಂದು, ಅಂದರೆ 01.06.2026 ಸೋಮವಾರ ದಂದು ಕಳಭ (ಪ್ರತಿಷ್ಠಾ ದಿನ) ನಡೆಯಲಿರುವುದು.  ರಾತ್ರಿ ದೀಪಾರಾಧನೆಯೂ ನಡೆಯಲಿರುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಬಂದು ಶ್ರೀ ಸರ್ವೇಶ್ವರಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿ. 

ವಿ. ಸೂ :
(1) ಪೂರ್ವಾಹ್ನ  11 ಗಂಟೆಗೆ ತುಲಾಭಾರ ಸೇವೆ ನಡೆಸಿ ಕೊಡಲಾಗುವುದು. ಸೇವಾರ್ಥಿಗಳು ಒಂದು ದಿನ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು.
(2) ಭಕ್ತರಿಂದ ಸೇವಾ ರೂಪದಲ್ಲಿ ದೀಪದ ಎಣ್ಣೆ, ಅಕ್ಕಿ ತೆಂಗಿನಕಾಯಿ, ಬಾಳೆಯ ಎಲೆಗಳು, ಹೂ, ತರಕಾರಿಗಳನ್ನು ಸ್ವೀಕರಿಸಲಾಗುವುದು.

ಇತೀ,
ಆಡಳಿತ ಮೊಕ್ತೇಸರರು 
 ಶ್ರೀ ಕ್ಷೇತ್ರ ಅಗಲ್ಪಾಡಿ.
Temples
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಪ್ರಕಟಣೆ