Karada Vishwa

News · March 2, 2026

ಶಂಕರ ಜಯಂತಿ ಹಾಗೂ ಸಾಮೂಹಿಕ ಬ್ರಹ್ಮೋಪದೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನಡೆಯಿತು.

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ ಯ ವತಿಯಿಂದ ವರ್ಷಂಪ್ರತಿ ನಡೆದುಬರುತ್ತಿರುವ ಶಂಕರ ಜಯಂತಿ ಆಚರಣೆ ಹಾಗೂ ತದಂಗವಾಗಿ ನಡೆಯಲಿರುವ ಸಾಮೋಹಿಕ ಬ್ರಹ್ಮೋಪದೇಶ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು 01.03.2026ರಂದು ಅಗಲ್ಪಾಡಿ ಶ್ರೀದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ವಲಯ ಸಮಿತಿ ಅಧ್ಯಕ್ಷ ವಾಸುದೇವ ಭಟ್ ಚೊಕೆಮೂಲೆ, ಪ್ರಧಾನ ಕಾರ್ಯದರ್ಶಿ ಗಣೇಶ ಚೇರ್ಕುಡ್ಲು, ದೇವಸ್ಥಾನದ ಮೇಲ್ವಿಚಾರಕರಾದ ಚಾಂಗುಳಿ ಅನಂತ ಭಟ್, ನೂಜಿ ಈಶ್ವರ ಭಟ್, ರಾಜೇಂದ್ರ ಪ್ರಸಾದ್ ಅಡ್ಕತೊಟ್ಟು, ಖ್ಯಾತ ಸಂಗೀತ ವಿದ್ವಾಂಸ ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್, ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಗುರುವಾಯೂರಪ್ಪ ಭಟ್ ಪೆಲ್ತಾಜೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಶಂಕರ ಜಯಂತಿ ಹಾಗೂ ಸಾಮೂಹಿಕ ಬ್ರಹ್ಮೋಪದೇಶದ ಆಮಂತ್ರಣ ಪತ್ರಿಕೆ ಬಿಡುಗಡೆ