Karada Vishwa

News · May 30, 2026

ಅನಂತಕೃಷ್ಣ ಸಿ ವಿ ಅವರಿಗೆ ದೂರದರ್ಶನ ಚಂದನದ 'ಬಿ' ಗ್ರೇಡ್ ಗೌರವ

ಅನಂತಕೃಷ್ಣ ಸಿ.ವಿ. ಅವರಿಗೆ ಅಭಿನಂದನೆಗಳು..

ಪ್ರಸಾರ ಭಾರತಿ – ದೂರದರ್ಶನ ಚಂದನದ ಸ್ಥಳೀಯ ನೃತ್ಯ ಆಡಿಷನ್ ಸಮಿತಿಯಿಂದ 'ಬಿ' ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿರುವ ಶ್ರೀ ಅನಂತಕೃಷ್ಣ ಸಿ.ವಿ. ಅವರಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು. 
ಮಂಗಳೂರಿನ ಅಶೋಕನಗರದ ಅನಂತಕೃಷ್ಣ ಸಿ.ವಿ. ಅವರು ಬಾಲ್ಯದಿಂದಲೇ ಭರತನಾಟ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಕಳೆದ ಹಲವು ವರ್ಷಗಳಿಂದ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಅವರು, ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಭಾರತ ಸರ್ಕಾರದ CCRT ವಿದ್ಯಾರ್ಥಿವೇತನ ಪುರಸ್ಕೃತರಾಗಿರುವ ಅನಂತಕೃಷ್ಣರು 100ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಅವರ ಪ್ರತಿಭೆ, ಪರಿಶ್ರಮ ಮತ್ತು ಕಲಾಸಾಧನೆಗೆ ಸಂದ ಈ ಗೌರವ ಇನ್ನಷ್ಟು ಉನ್ನತ ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇವೆ.
ಕರಾಡ ವಿಶ್ವದ ವತಿಯಿಂದ ಶುಭಾಶಯಗಳು ಹಾಗೂ ಅಭಿನಂದನೆಗಳು.


Achievers
ಅನಂತಕೃಷ್ಣ ಸಿ ವಿ ಅವರಿಗೆ ದೂರದರ್ಶನ ಚಂದನದ 'ಬಿ' ಗ್ರೇಡ್ ಗೌರವ