Karada Vishwa

Article · October 12, 2026

ದೇವಿ ದುರ್ಗಾಂಬೆ...

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ವರುಷಕೊಂಭತ್ತು ದಿನ
ನವರಾತ್ರಿ ಪೂಜೆ/
ಪೂಜಿಸಲ್ಪಡುವವಳು
ಶ್ರೀ ಮಾತೆ ಗಿರಿಜೆ /

ಬರಿದೆ ಧ್ಯಾನವ ಮಾಡಿದರು
ಒಲಿಯುತಾಳೆ /
ಹಿರಿದೆ ಭಜನೆಯ ಮಾಡಿದರು
ಮೆಚ್ಚುತಾಳೆ /

ನಾಮಜಪವನು ಮಾಡೆ
ಒಲಿದು ಬರುತಾಳೆ /
ಇಷ್ಟಾರ್ಥಗಳ ಸಿದ್ಧಿ
ಮಾಡಿಕೊಡುತಾಳೆ /

ತಾಯಿಯಾಗಿ ಜಗವ
ಕಾಯುತಿರುತಾಳೆ /
ಶಕ್ತಿರೂಪಿಣಿ,ದುಷ್ಟರ
ಸಂಹರಿಸುತಾಳೆ /

ಕಷ್ಟವೆಂದರೆ ಬಳಿಗೆ
ಓಡಿ ಬರುತಾಳೆ /
ಅಸುರ ಶಕ್ತಿಯ ದೂರ
ಸರಿಸಿ ಬಿಡುತಾಳೆ /


ಹರುಷ ನೀಡುತ ಜಗಕೆ
ನಗುವ ತರುತಾಳೆ /
ಸೂಕ್ಷ್ಮ ರೂಪಿಣಿಯಾಗಿ
ಸಂಚರಿಸುತಾಳೆ /

ನಿತ್ಯ ನಮನವು ನಿನಗೆ
ದೇವಿ ದುರ್ಗಾಂಬೆ /
ಶ್ರೀ ಚಕ್ರ ರೂಪಿಣಿ
ದೇವಿ ಜಗದಂಬೆ /.



Creative Writings