
Article · November 25, 2025
ಕಾಲ?
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
☘️☘️☘️☘️☘️
ಏನು ಕಾಲವು ಬಂತೊ ಏನು ಕಾಲವು ಬಂತೊ
ಅಸ್ತವ್ಯಸ್ತವದೀಗ ಜನಜೀವನ,
ಗಂಡು ಹೆಣ್ಣು ಎಂಬ ಬೇಧಭಾವಗಳಿಲ್ಲ
ದುಡಿಮೆಯಲ್ಲಿ ಎಲ್ಲರೂ ಸರಿಸಮಾನ l
ಮದುವೆ ಎಂಬುವುದೀಗ ವ್ಯಾಪಾರವಾಗಿಹುದು
ಹುಡುಗನಾ ಆಸ್ತಿ ಅಂತಸ್ತು ನೋಡೀ
ಯೋಗವೂ ಕೂಡಿ ಬರುವುದು ಹೀಗೆಯೇ ನೋಡಿ
ಸಿರಿವಂತ ಹುಡುಗನಾ ಹುಡುಕಿ ನೋಡಿ!
ಮದುವೆಯಾದರು ಕೂಡ ಹೊಂದಾಣಿಕೆಯು ಕಡಿಮೆ
ಕೆಲವೆ ವರುಷಗಳಲ್ಲಿ ವಿಚ್ಚೇದನ!
ಹುಡುಗನಾಸ್ತಿಯ ಅರ್ಧ ಪಾಲು ಹುಡುಗಿಗೆ ಹೋಯ್ತು
ನ್ಯಾಯಾಲಯವು ಕೂಡ ಒಪ್ಪಿತಿದನ !
ನಿಜಕು ಗಂಡಿನ ತಪ್ಪು ಇದ್ದಲ್ಲಿ ತಪ್ಪದೆಯೆ
ಧನಸಹಾಯವು ಇರಲಿ ಹೆಣ್ಣಿಗಾಗಿ,
ಆಸ್ತಿ ವಂಚನೆಗಾಗಿ, ಮೋಸ ಹೆಣ್ಣಿನದಿರಲು,
ಅರಿವಾಗಲೀ, ಗಂಡು ಕೂಡ ತ್ಯಾಗಿ!
ಹೇಳಿರುವೆ ನಾನಿಲ್ಲಿ ನನ್ನ ಮನಸಿನ ಭಾವ
ಗಂಡು ಹೆಣ್ಣು ಎಂಬ ಭೇದವಿರದೆ,
ಎಲ್ಲಿ ನ್ಯಾಯವು ಇಹುದೊ, ಅಲ್ಲಿಗಿರಲೀ ಗೆಲುವು,
ಇರಲಿ ನ್ಯಾಯವು ಸಮಾನವಾಗಿ !
☘️☘️☘️☘️☘️
ಕಿರುಪರಿಚಯ :
ಜಯಶ್ರೀ ಐಲುಕುಂಜೆ, ಪಳ್ಳತಡ್ಕ - ಪರಿಸರಪ್ರಿಯೆ . ಗೃಹಿಣಿ . ಮನಸಿಗನಿಸಿದ್ದನ್ನು ಚೊಕ್ಕವಾಗಿ ಪುಟಕ್ಕಿಳಿಸುವ ಹವ್ಯಾಸ. ಕರಾಡ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಬರೆಯಬಲ್ಲರು.

