
Article · July 13, 2026
ಗಾನಕೋಗಿಲೆ ಜಾನಕಿಯಮ್ಮನಿಗೆ ನುಡಿನಮನ
✍️ಮೀರಾ ಭಟ್ ಮಂಗಳೂರು
ಸಪ್ತಸ್ವರಗಳ ಗಂಟಲಲ್ಲಿರಿಸಿದ ಗಂಧರ್ವ ಗಾಯಕಿ
ಸರಸ್ವತಿ ದೇವಿಯನ್ನು ಮನವೊಲಿಸಿದ ನಾಯಕಿ
ನಡೆದಳು ಬಹುದೂರ ಆದರ್ಶದಲ್ಲೇ ಬದುಕಿ
ನಮ್ಮೆಲ್ಲರ ಪ್ರೀತಿಯ ಗಾನಕೋಗಿಲೆ ಎಸ್ ಜಾನಕಿ .....||
ಕನ್ನಡ ನಾಡಿನ ಬಗ್ಗೆ ಎಷ್ಟು ಪ್ರೇಮ ನಿನಗೆ ನೋಡು
ಕನ್ನಡ ಭಾಷೆಯಲ್ಲೇ ನಿನ್ನ ಅಂತಿಮ ಹಾಡು
ಈ ನೆಲದಲ್ಲೇ ನೀನು ಮರು ಜನುಮ ಪಡೆದು ಬಿಡೂ
ಕಾಯುತ್ತಿದೆ ನಿನಗಾಗಿ ಇಡೀ ಕನ್ನಡ ನಾಡು ||
ಸರಳ ಸಜ್ಜನಿಕೆಯ ಗಾನಕೋಗಿಲೆ
ಬದುಕಿನುದ್ದಕ್ಕೂ ಕಳೆದೆ ನೀನು ಬಿಳಿ ಸೀರೆಯಲ್ಲೇ
ನಿನ್ನನ್ನು ಬೀಳ್ಕೊಡುವುದು ಸಹಿಸದ ನೋವಲ್ಲೇ
ನಿನಗೆ ಚಿರಶಾಂತಿ ಕನ್ನಡ ಮಣ್ಣಲ್ಲೇ..❤️ ||
ಸಹಸ್ರ ಸಹಸ್ರ ಹಾಡುಗಳು ಇಹದಲ್ಲಿ ಜೀವಂತ
ಅರುವತ್ತು ದಶಕಗಳ ಸಾಧನೆ ಬಣ್ಣಿಸಲಿ ಏನೆಂತ
ಸಾಕಾಯ್ತೆ ನಿನಗೆ ಈ ಬದುಕಿನ ಧಾವಂತ
ಸದ್ಗತಿ ನೀಡಲಿ ನಿನ್ನ ಆತ್ಮಕ್ಕೆ ಆ ಭಗವಂತ ||
🙏🙏
Creative Writings
