Karada Vishwa

Article · March 26, 2026

ತೋಚಿದ್ದು ಗೀಚಿದ್ದು

(ಕವನ) - ಶ್ರದ್ಧಾ ಭಟ್ ಕೆ ಚಂದುಕೂಡ್ಲು

ಹೃದಯದೊಳಗೆ ಉದಯವಾದ ತರಂಗಗಳ  ಹೇಗೆ ಊಹಿಸಲಿ?
ಅಣುಗಳ ಅಭಿಲಾಷೆಯ ಹೇಗೆ ವರ್ಣಿಸಲಿ?
ಮನದ ಕನಸಿನ ಕದನವ ನಿಲ್ಲಿಸಬಹುದು.
ಪರಮಾತ್ಮನ ಪರಮಪದದ ಪಥವ 
ದಾಳಗಳ ಸಂಭವನೀಯತೆಯ 
ಹೇಳಲು ಗಾಂಧಾರ ಕುಮಾರನ ಕರೆಯಬೇಕೆ?

ಯಾವುದೇ ಊಹಾಪೋಹ, 
ಸಂಭವಗಳ ವರ್ಣನೆಗಳೇ ಬೇಕಿಲ್ಲ.
ಸೃಷ್ಟಿಯ ಸಾರವೂ ಗೊತ್ತಿಲ್ಲ,
ಲಯದೊಳು ಬರುವ ಲೀಲೆಗಳ ಅರಿವಿಲ್ಲ,
ವಿನಾಶದ ಭಯವಂತೂ ಮೊದಲೇ ಇಲ್ಲ.

ಆಗಾಗ್ಗೆ ಅರಿವಿಗೆ ಬರುವುದು ಒಂದು
'ಪರಮಾ'ಣು 'ಪರಮಾ'ತ್ಮನೂ ಪರರು ಅಲ್ಲವೆಂದು
ಸರ್ವ ಜೀವರಾಶಿಗಳ ಪ್ರೀತಿಸುವ ಪಾರ್ಥಸಾರಥಿಯೆಂದು
Creative Writings
ತೋಚಿದ್ದು ಗೀಚಿದ್ದು