Karada Vishwa

News · November 7, 2025

ಕರಾಡ ಸಹಾಯ ಬಂಧು ಚಾರಿಟೇಬಲ್ ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಹಾಗೂ ಆಂಬ್ಯುಲನ್ಸ್ ಸೇವೆಯ ಲೋಕಾರ್ಪಣೆ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ 5.11.2025 ನೇ ಬುಧವಾರ ಕಾರ್ತಿಕ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟನ ಔಪಚಾರಿಕ ಉದ್ಘಾಟನೆ ನೆರವೇರಿತು.

ಋಗ್ವೇದದ ಕೊನೆಯ ಸೂಕ್ತ ನಮಗೆಲ್ಲ ಸಮಾನತೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ. ಈ ಸೂಕ್ತದ ಕೊನೆಯ ಭಾಗದಲ್ಲಿ ಸಮಾನತೆೆಯನ್ನೂ ಮೀರಿ, ಸಹ ಚಿತ್ತಾಮೆಷಾಂ ಅಂತ ಕೂಡ ಬೋಧಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ರಾಷ್ಟ್ರೀಯ ಕಾರ್ಯಕರ್ತರಾದ  ಶ್ರೀ. ಸುಬ್ರಹ್ಮಣ್ಯ ಭಟ್, ಕಜಂಪಾಡಿ ಅವರು ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದರು. 
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ 5.11.2025 ನೇ ಬುಧವಾರ ಕಾರ್ತಿಕ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟನ್ನು ಔಪಚಾರಿಕವಾಗಿ ಉದ್ಘಾಟನೆಯನ್ನು ಮಾಡುತ್ತಾ  ಸೇವಾ ಕೈಂಕರ್ಯದಲ್ಲಿ ಸಮಾನತೆ ಮತ್ತು ಸಹ ಚಿತ್ತದ ಆವಶ್ಯಕತೆಯನ್ನು ತಿಳಿಸಿದರು. ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟ್ ಮುಂದಕ್ಕೆ ಉತ್ತಮ ಸೇವಾ ಕಾರ್ಯಗಳನ್ನು ಮಾಡಿ ಉನ್ನತ ಮಟ್ಟಕ್ಕೆ ತಲುಪಲಿ. ಸಮಾಜಕ್ಕೆ ಅನುಕರಣೀಯವಾಗಿರಲೆಂದು ಕೂಡ ಹರಸಿದರು. ಇದೇ ಸಂದರ್ಭದಲ್ಲಿ ಕರಾಡ ಸಹಾಯ ಬಂಧು ಚಾರಿಟೇಬಲ್ ಟ್ರಸ್ಟ್ ನ ಜನ ಪರ ಕಾರ್ಯಕ್ರಮದ ಭಾಗವಾಗಿ ಹೊಸದಾದ ಆಂಬುಲೆನ್ಸ್ ನ್ನು ಕಾಸರಗೋಡಿನ ಪ್ರಖ್ಯಾತ ಹಿರಿಯ ಮೂಳೆ ತಜ್ಞರಾದ ಶ್ರೀ.ಡಾ. ಅನಂತಪದ್ಮನಾಭ ಭಟ್ ಅವರು ಲೋಕಾರ್ಪಣೆ ಮಾಡುತ್ತಾ ಮಾತನಾಡಿ, ಸಮಾಜದ ಅಶಕ್ತರಿಗೆ ಆರೋಗ್ಯ ಸೇವೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಸೇವಾ ಕಾರ್ಯಕ್ರಮಗಳು ಟ್ರಸ್ಟ್ ನ ವತಿಯಿಂದ ನಿರಂತರ ನಡೆಯಲಿ ಎಂದು ತಿಳಿಸುತ್ತಾ ಶುಭಾಶಂಸನೆಗೈದರು. ಶ್ರೀಮಾನ್ ಉಪ್ಪಂಗಳ ವಾಸುದೇವ ಭಟ್, ಅನುವಂಶಿಕ ಮೊಕ್ತೇಸರರು ಅಗಲ್ಪಾಡಿ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅವರು ಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಶ್ರೀದೇವಿಯ ಅನುಗ್ರಹ ಸರ್ವರಿಗೂ ಮಂಗಳವನ್ನುಂಟುಮಾಡಿ ಕಾಪಾಡಲಿ ಎಂದು ಹರಸಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿರುವ ಶ್ರೀ ವಿಶ್ವನಾಥ ಭಟ್, ಬೇಂದ್ರೋಡು ಅವರು ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟಿಗೆ ಶುಭಕೋರಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಜಯಲಕ್ಷ್ಮಿ ಆನೆಮಜಲು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಮಾಡಿದರು. ಶ್ರೀಯುತ ಕೃಷ್ಣಮೂರ್ತಿ ಎಡೆಪ್ಪಾಡಿ ಅವರು, ಈಗ ಅಧಿಕೃತವಾಗಿ ಟ್ರಸ್ಟ್ ಆಗಿ ರಿಜಿಸ್ಟರ್ಡ್ ಆಗಿರುವ ಕರಾಡ ಸಹಾಯಕ ಬಂಧು 2021 ಜುಲೈ ಯಿಂದ ಪ್ರಾರಂಭಗೊಂಡು ಇಂದಿನವರೆಗೆ ಅಶಕ್ತರಿಗೆ ನೀಡಿರುವ ಸೇವಾ ಕಾರ್ಯಗಳ ಬಗ್ಗೆ ಮತ್ತು ಕರಾಡ ಸಹಾಯಕ ಬಂಧು ವೈದ್ಯಕೀಯ ಉಪಕರಣ ಭಂಡಾರದ ಬಗ್ಗೆ, ಕರಾಡ ರಕ್ತನಿಧಿ,ವಿದ್ಯಾನಿಧಿಯ ಬಗ್ಗೆ, ರಾಷ್ಟ್ರ ಸೇವೆ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳ ಬಗ್ಗೆ, ಮುಳ್ಳೇರಿಯಾ ಸಹಕಾರಿ ಆಸ್ಪತ್ರೆಲ್ಲಿ ನೀಡಿರುವ 2 ಡಯಾಲಿಸಿಸ್ ಮೆಷಿನ್ ಗಳ ಬಗ್ಗೆ ನೆರೆದವರಿಗೆ ಸ್ಥೂಲ ಚಿತ್ರಣವನ್ನು ನೀಡಿ ಆಮಂತ್ರಿತ ಗಣ್ಯರನ್ನು ಜೊತೆಗೆ ಸಭಿಕರಿಗೂ ಸ್ವಾಗತ ಕೋರಿದರು. ಸಭೆಯ ಕೊನೆಯಲ್ಲಿ ಪುರುಷೋತ್ತಮ ಪ್ರಸಾದ್, ಪಾರ್ಥಕೊಚ್ಚಿ ಧನ್ಯವಾದ ತಿಳಿಸಿದರು. ಇಂದಿನಿಂದ ಕರಾಡ ಸಹಾಯಕ ಬಂಧು ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದು ಅಧಿಕೃತರು ತಿಳಿಸಿದರು.

Sahayaka Bhandu
ಕರಾಡ ಸಹಾಯ ಬಂಧು ಚಾರಿಟೇಬಲ್ ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಹಾಗೂ ಆಂಬ್ಯುಲನ್ಸ್ ಸೇವೆಯ ಲೋಕಾರ್ಪಣೆ