
Event · October 5, 2025
ಅನಂತಕೃಷ್ಣ ಸಿ.ವಿ. ಅವರ ಭರತನಾಟ್ಯ ರಂಗಪ್ರವೇಶಕ್ಕೆ ಆಹ್ವಾನ
ದಿನಾಂಕ: 25-10-2025, ಶನಿವಾರ. 🕔 ಸಮಯ: ಸಂಜೆ 5.00 ಗಂಟೆಗೆ. ಸ್ಥಳ: ಮಂಗಳೂರು ಟೌನ್‌ಹಾಲ್
2003 ಜನವರಿ 8 ರಂದು ಜನಿಸಿದ ಅನಂತಕೃಷ್ಣ ಸಿ ವಿ ಅವರು ಶ್ರೀ ಚಂದ್ರಶೇಖರ ಮುಂಡೂರು ಹಾಗೂ ನೃತ್ಯ ವಿದುಷಿ ವಿದ್ಯಾ ಚಂದ್ರಶೇಖರ ಇವರ ಪುತ್ರ. ಮಂಗಳೂರು ಅಶೋಕ ನಗರ ನಿವಾಸಿ.
ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಕೃತಿ ಚಿಕೆತ್ಸೆ ಮತ್ತು ಯೋಗ ವಿಜ್ಞಾನ ಪದವಿಯಲ್ಲಿ ಮೂರನೇ ವರ್ಷದ ವ್ಯಾಸಂಗವನ್ನು ಮುಗಿಸಿರುತ್ತಾರೆ.
ಅನಂತಕೃಷ್ಣ 10ನೇ ವಯಸ್ಸಿನಿಂದಲೇ ಭರತನಾಟ್ಯವನ್ನು ಕಲಿಯತೊಡಗಿದರು. ವಿದುಷಿಯರಾದ ಗೀತಾ ಸರಳಾಯ ಹಾಗೂ ರಶ್ಮಿ ಚಿದಾನಂದ ಅವರಲ್ಲಿ ತರಬೇತಿ ಪಡೆದ ಅವರು ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಗುರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯರಾಗಿದ್ದು ವಿದ್ವತ್ ಅಂತಿಮ ಪರೀಕ್ಷೆಯ ತಯಾರಿಯಲ್ಲಿದ್ದಾರೆ; ಹಾಗೂ ಶ್ರೀಮತಿ ಜಯಭಾರತಿ ಪ್ರಕಾಶ್, ಕಾಸರಗೋಡು ಇವರಲ್ಲಿ ಕರ್ನಾಟಕ ಶಾಸ್ತೀಯ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.
ಕರ್ನಾಟಕವಲ್ಲದೆ ಭಾರತದ ಬೇರೆ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
2016-17 ರಿಂದ ಭಾರತ ಸರ್ಕಾರದಿಂದ CCRT ವಿದ್ಯಾರ್ಥಿವೇತನವನ್ನು ಪಡೆದುಕೊಂಡಿದ್ದಾರೆ. ಶ್ರೀಮತಿ ಪ್ರಿಯದರ್ಶಿನಿ ಗೋವಿಂದ್, ಶ್ರೀಮತಿ ಚಿತ್ರಾ ವಿಶ್ವೇಶ್ವರನ್, ಶ್ರೀ ಪಾರ್ಶ್ವನಾಥ್ ಉಪಾಧ್ಯೆ, ವೈಭವ್ ಆರೆಕರ್, ಕಾವ್ಯ ಮುರಳೀಧರನ್ ಮೊದಲಾದ ಅನೇಕ ಖ್ಯಾತ ನೃತ್ಯ ಕಲಾವಿದರ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಇನ್ನಷ್ಟು ಪ್ರೌಢಗೊಳಿಸಿಕೊಂಡಿದ್ದಾರೆ. ಇದುವರೆಗೆ 100ಕ್ಕೂ ಹೆಚ್ಚು ಏಕವ್ಯಕ್ತಿ ಹಾಗೂ ಸಮೂಹ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ವಿವರ ಹೀಗಿದೆ:
ದಿನಾಂಕ: 25-10-2025, ಶನಿವಾರ
🕔 ಸಮಯ: ಸಂಜೆ 5.00 ಗಂಟೆಗೆ
📍 ಸ್ಥಳ: ಮಂಗಳೂರು ಟೌನ್‌ಹಾಲ್
ನಮ್ಮ ಸಮಾಜದ ಪ್ರತಿಭಾವಂತ ಕಲಾವಿದನಾದ ಅನಂತಕೃಷ್ಣ ಇವರಿಗೆ ಆಶೀರ್ವಾದವನ್ನು ಮತ್ತು ಪ್ರೋತ್ಸಾಹವನ್ನು ನೀಡಲು ತಾವು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ. 🙏




