
News · June 21, 2026
ಶ್ರೀ ಕೃಷ್ಣರಾಜ್ ಶರ್ಮಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
- ಕರಾಡ ವಿಶ್ವ
ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ತಮ್ಮ ಸಂಸ್ಥೆ iValue InfoSlutions ಮೂಲಕ ₹35 ಲಕ್ಷಗಳ ಉದಾರ ದೇಣಿಗೆಯನ್ನು ನೀಡಿರುವ ಶ್ರೀ ಕೃಷ್ಣರಾಜ್ ಶರ್ಮಾಕೊಲ್ಲೆಂಕಾನ ಅವರಿಗೆ ಕರಾಡ ವಿಶ್ವದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ಶಿಕ್ಷಣ ಕ್ಷೇತ್ರದ ಮೇಲಿನ ಅವರ ಕಾಳಜಿ, ಸಮಾಜಸೇವೆಯ ಮನೋಭಾವ ಹಾಗೂ ಉದಾರತೆ ನಮ್ಮ ಕರಾಡ ಬ್ರಾಹ್ಮಣ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಈ ಸತ್ಕಾರ್ಯವು ಅನೇಕರಿಗೆ ಪ್ರೇರಣೆಯಾಗಲಿ ಹಾಗೂ ಶಿಕ್ಷಣದ ಬೆಳಕು ಇನ್ನಷ್ಟು ಮಕ್ಕಳ ಬದುಕನ್ನು ಉಜ್ವಲಗೊಳಿಸಲಿ ಎಂಬುದು ನಮ್ಮ ಹಾರೈಕೆ.
ಸಮಾಜ ಸೇವೆಯ ಇಂತಹ ಮತ್ತಷ್ಟು ಅವಕಾಶಗಳು ಕೃಷ್ಣ ರಾಜ ಶರ್ಮಾ ಅವರಿಗೆ ದೊರೆಯಲಿ, ಅವರ ಸೇವಾ ಮನೋಭಾವ ಇನ್ನೂ ಅನೇಕರನ್ನು ಪ್ರೇರೇಪಿಸುತ್ತಿರಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇವೆ.

