Karada Vishwa

News · August 14, 2026

ವಿಜ್ಞಾನ ಮಾದರಿಯಲ್ಲಿ ಚಿರಾಗ್‌ಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ

ಕರಾಡ ವಿಶ್ವದ ಅಭಿನಂದನೆಗಳು

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿಸಿದ ವಿದ್ಯಾಭಾರತಿ ಕರ್ನಾಟಕ ಇದರಿಂದ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ -ವಿಜ್ಞಾನ ಸಂಸ್ಕೃತಿ ಮಹೋತ್ಸವದಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿರಾಗ್ ಎ.ಎಸ್. ಬಾಲ ವರ್ಗದ ವಿಜ್ಞಾನ ವಿಭಾಗದಲ್ಲಿ "ಕಂಸರ್ವೇಶನ್ ಆಫ್ ಇಲೆಕ್ಟ್ರಿಸಿಟಿ" ವಿಷಯದಲ್ಲಿ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ. ಚಿರಾಗ್ ಎ.ಯಸ್. ಪಡ್ರೆ ಸೈಪಂಗಲ್ಲು ಕಾನ ನಿವಾಸಿ ಇಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಅನಿಲ್ ಕುಮಾರ್ ಯಸ್.ಕೆ ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅನಿತಾ ಇವರ ಪುತ್ರ.

Achievers