Karada Vishwa

Article · June 29, 2026

ಇ(ಮಿ)ತಿ

---ಸಂತೋಷ್ ಕುಮಾರ್ ಎನ್ ಎಸ್, ನಡುಮನೆ ಸಾಲೆತಡ್ಕ

ಯೌವನದ ವೇಗ ಕ್ಷಣಿಕ,

ಮುಪ್ಪಿನ ವಿವೇಕ ಶಾಶ್ವತ.

ಯೌವನ ಓಡುತ್ತದೆ ಆವೇಗದಿಂದ,

ಮುಪ್ಪು ನಡೆಯುತ್ತದೆ ಅನುಭವದಿಂದ.

ಯೌವನದ ವೇಗ ಮಿಂಚಿನ ಓಟ,

ಮುಪ್ಪಿನ ವಿವೇಕ ಬದುಕಿನ ಪಾಠ.

ಯೌವನದ ಆವೇಗ ಅಗ್ನಿಯ ಜ್ವಾಲೆ,

ಮುಪ್ಪಿನ ವಿವೇಕ ಜೀವನದ ದೀಪಮಾಲೆ.

ಯೌವನದ ಬಲ ಭುಜದಲ್ಲಿ,

ಮುಪ್ಪಿನ ಬಲ ಬುದ್ಧಿಯಲ್ಲಿ.

ಯೌವನದ ವೇಗ ಕಾಲಿಗೆ,

ಮುಪ್ಪಿನ ವಿವೇಕ ತಲೆಗೆ.

ಯೌವನದಲ್ಲಿ ಓಡುವುದು ದೇಹ,

ಮುಪ್ಪಿನಲ್ಲಿ ಓಡುವುದು ನೆನಪಿನ ಸ್ನೇಹ

ಆದರೂ

ಯೌವನದಲ್ಲಿ ಎಂಥದ್ದೋ ಆವೇಗ,

ಮುಪ್ಪಾಗುವಾಗ ಯಾಕಿಲ್ಲ ಆ ವೇಗ!

Creative Writings