
Article · November 16, 2026
ಬರ
ವೀಣಾ ಎಂ ಭಟ್
ಬರ ಬಾರದೆಯೆ ರಮೆಯೆ ನೀನಿಲ್ಲದ ಬರ
ಚಳಿಯ ಅಬ್ಬರದಲ್ಲಿ ಇಬ್ಬಗೆಯ ಬರವೂ
ಶುದ್ಧ ವಾಯುವಿಹಾರಕೆ ಖುದ್ದು ನಿನ್ನದೆ ಬರ
ಉಷೆಯಿಂದ ನಿಶೆವರೆಗೆ ನೀನಿಲ್ಲದ ಬರವೂ
ಪ್ರಾತಃ ಕಾಲದ ತೀರ್ಥ ಇಲ್ಲವೇ ಅದಕೆ ಬರ
ತಿಂಡಿ ಮಾಡೋ ಜನವು ಇಲ್ಲದೇ ಬಂತು ಬರ
ಉಣ್ಣುವ ಆಸೆಗೆ ಕಣ್ಣಾಮುಚ್ಚಾಲೆಯು
ಇನ್ಯಾರನ್ನು ದೂರಲಿ ನಾ ಬಂತಲ್ಲಿ ಅಲ್ಲೂ ಬರ
ಜಳಕ ಮಾಡಲು ಹೋದೆ ಬಿಸಿ ನೀರಿನ ಬರವು
ಪುಳಕ ಇಲ್ಲವು ಮನಕೆ ಅದನು ಕಾಡಿತು ಬರವು
ಸ್ವಚ್ಛತೆಯು ಎಳ್ಳಷ್ಟೂ ಇಲ್ಲ ಕಾದಿದೆ ಅದಕೆ ಬರ
ಅಸ್ವಸ್ಥಗೊಂಡ ಮನ ಅದಕೆಂದು ಇಲ್ಲ ಬರ
ಶಯನಾಗಾರದಿ ಏಕಾಂತದಿ ನಿನ್ನ ಬರ
ಪಲ್ಲಂಗದಲಿ ಪವಡಿಸಿದೆ ಕಾಡಿತು ನಿನ್ನ ಬರ
ನಿದ್ದೆ ಬಾರದು ಹೊದ್ದು ಮಲಗಿದರೆ ನಿದ್ದೆ ಬರ
ನೀನಿಲ್ಲದೆ ದಿನವೆಲ್ಲ ಪ್ರೀತಿಗೆ ಬರವು
Creative Writings
