Karada Vishwa

Article · August 28, 2026

ಭಕ್ತಿಗೀತೆ

ವೀಣಾ ಎಂ ಭಟ್

ಏನು ಸುಖವೊ ಮಧುರ ನಿನ್ನ ನಾಮ ಜಪದಲ್ಲಿ

ಸಾನುರಾಗದಿ ಸ್ಮರಣೆ ಅನವರತ ಮನದಲ್ಲಿ

ಹಗಲಿರುಳು ಸೇವೆಯು ನಿರ್ಮಲ ಚಿತ್ತದಲಿ

ಭಾವನೆಗೆ ಸ್ಪಂದನೆಯು ಅನವರತ ಇರಲಿ

ಮಧುರಾತಿಮಧುರ ನಿನ್ನ ಸುಂದರ ಹೃದಯದಲಿ

ಭಗವಂತ ಪೊರೆಯುವೆ ಭಕ್ತರನು ಕರುಣೆಯಲಿ

ಈಶ ನಿನ್ನ ನಾಮವದು ನಾಲಗೆಗೆ ಅಮೃತವೂ

ಪಾಶ ಬಿಗಿದಾಗಲೂ ಬರಲೆನ್ನ ಜಿಹ್ವೆಯೊಳು

ಶೇಷಶಯನನೆ ನಿನ್ನ ಪಾದಕಮಲಕೆ ಮಣಿವೆ

ಕಾಶಿ ರಾಮೇಶ್ವರದ ದರುಶನ ಭಾಗ್ಯವು ಇದುವೆ

ಕಷ್ಟ ಸುಖಗಳನೆಲ್ಲ ಬಿಡುವೆ ನಿನ್ನ ಧ್ಯಾನದಲಿ

ಇಷ್ಟವಿಲ್ಲ ಇನ್ನೇನೂ ಮೈಮರೆವೆ ಜಪದಲ್ಲಿ

ಪಟ್ಟ ಪಾಡುಗಳೆಲ್ಲ ನೀಗಿಸಿದೆ ಕ್ಷಣ ಮಾತ್ರದಲಿ

ಬಿಟ್ಟು ಬಿಡಲಾರೆ ದೇವಾ ಧ್ಯಾನವನು ಇಹದಲ್ಲಿ

ಪಕ್ಷಿವಾಹನ ನಿನ್ನ ದಿವ್ಯ ನಾಮದ ಮಹಿಮೆ

ಅಕ್ಷರ ಅಕ್ಷರವೆಲ್ಲ ನೀಡಿ ನಾಲಗೆಯ ಗರಿಮೆ

ರಕ್ಷಿಸಲಿ ಶಿಕ್ಷಿಸಲಿ ಮನದಿ ಅಕ್ಷಯವಾಗಿರಲಿ

ಅಕ್ಷಿಯೊಳು ಪನ್ನಗ ಶಯನ ಮೂರ್ತಿ ಬರಲಿ

Creative Writings