
Article · March 18, 2026
ಚೈತ್ರ ವೈಶಾಖದಲಿ ಚಿಗುರಿ ಬದುಕಿನ ಬಳ್ಳಿ...
- ಅಶೋಕ ಮುಂಡಕಾನ
ಚೈತ್ರ ವೈಶಾಖದಲಿ ಚಿಗುರಿ ಬದುಕಿನ ಬಳ್ಳಿ
ಜ್ಯೇಷ್ಠ ಆಷಾಢದಲಿ ಹೂ ನೀಡಲಿ
ಶ್ರಾವಣದ ತಂಬೆಲರು ಫಲವ ಮಾಗಿಸಿ ಕೊಡಲಿ
ಭಾದ್ರಪದದಲಿ ದುಡಿಮೆ ಘನತೆಯತ್ತ
ಆಶ್ವಯುಜ ಕಾರ್ತಿಕದಿ ಉತ್ತುಂಗಕೇರು ನೀ
ಮಾರ್ಗಶಿರದಲಿ ನೀಡು ಮಾರ್ಗದರ್ಶನವ
ಪುಷ್ಯ ಮಾಸದ ಬೈಗು ಸಂತೃಪ್ತಿಯನು ತರಲಿ
ಮಾಘ ಬದುಕಿನ ಸಂಜೆ ತೃಪ್ತಿ ಅನುಭವಿಸು
ಬದುಕಿ ಬಾಳಿದ ಹಾದಿ ಹಿಂತಿರುಗಿ ನೋಡುತ್ತ
ವಿರಮಿಸೊಬ್ಬನೆ ನೀನು ಫಾಲ್ಗುಣದಲಿ
ನೀನು ಬಾಳಿದ ರೀತಿ ನಿನಗೆ ನೆಮ್ಮದಿ ತರಲಿ
ಸಂತೆಯುಸಾಬರಿಯು ನಿನಗೇತಕೆ
ಕಾಲ ಕರೆಯುವ ತನಕ ನಿನಗೆ ನೀನೇ ಗೆಳೆಯ
ವಿರಮಿಸೊಬ್ಬನೆ ನೀನು ಸಂಭ್ರಮದಲಿ
Creative Writings
