Karada Vishwa

Article · June 15, 2026

ಬಾಳೆಲೆಯೂಟದ ಸೊಗಸಿನ ಬಂಧ!

✍🏻ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ

ಬಾಳೆಯ ಎಲೆಯನು ಚೊಕ್ಕದೊಳಿರಿಸೀ
ಊಟವ ಬಡಿಸುವುದೊಂದು ಕಲೆ../
ಬಡಿಸುವುದಕ್ಕೂ ರೀತಿಯು ನಿಯಮ,
ಸಂಪ್ರದಾಯವೂ ಇದರ ನೆಲೆ/

ಬಾಳೆಯ ಎಲೆಯಲಿ ಬಡಿಸಿದ ಊಟವ
ಉಣ್ಣುವುದೂ ಸಹ ಒಂದು ಕಲೆ.../
ಚೆಲ್ಲದ ಹಾಗೇ ಉಣ್ಣುತಲಿರಲೂ,
ಬಾಯಿಗೆ ರುಚಿಯೂ ಬಹಳ ಭಲೇ.../

ಬಾಡಿಸಿದರೆ ಎಲೆ ಬೇಗನೆ ಹರಿಯದು, 
ತಿಳಿದರಿದನು  ಜನ ಬಳಸಿ  ತಲೇ../
ಮುರಿಯದೆ ಕಡಿದೂ ಹರಿಯದೆ ತೊಳೆದೂ,
ಉಂಡರೆ ಊಟಕೆ ಸತ್ವ ಭಲೇ ../

ಮದುವೆಗು, ಮುಂಜಿಗು,ಶುಭಕೂ, ಅಶುಭಕು,
ಬೇಕೇ ಬೇಕು ಬಾಳೆ ಎಲೆ.../
ಹೊತ್ತಿಗೆ ಸರಿಯೇ ಮರೆಯದೆ ಕಡಿದೂ ,
ಸಂಗ್ರಹಿಸುವುದೂ ಒಂದು ಕಲೆ.../

ಕಡಿದಿಹ ಎಲೆಗಳ  ಕೊಂಚವು ಹರಿಯದೆ,
ಹೊರೆಯನು ಕಟ್ಟುವುದೊಂದು ಕಲೆ../
ಮನುಜನಿಗೂ ಈ ಬಾಳೆಯ ಎಲೆಗೂ
ನಡುವಿನ ಬಂಧವು ಸೊಗಸು ಭಲೇ../

☘️☘️☘️☘️
Creative Writings