Karada Vishwa

News · August 24, 2026

SSBL Season–3 ಟೂರ್ನಿ ಯಶಸ್ವಿ ಸಮಾಪ್ತಿ

– ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ಶಂಕರ ಸದನ ಕ್ರೀಡಾ ಸಮಿತಿ, ಪೆರ್ಲ

ಆತ್ಮೀಯ ಸಮಾಜ ಬಾಂಧವರೇ,

ಶ್ರೀ ಶಂಕರ ಸದನ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ SSBL Season–3 ಟೂರ್ನಿ ಮಂಗಳೂರು ಊರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 8:45ಕ್ಕೆ TVS ಕಂಪನಿಯ ಅಧಿಕಾರಿಗಳಿಂದ ಜರ್ಸಿ ಅನಾವರಣ ನೆರವೇರಿದ ಬಳಿಕ ಪಂದ್ಯಾವಳಿ ಆರಂಭವಾಯಿತು. ಬೆಳಿಗ್ಗೆ 10:30ಕ್ಕೆ ನಡೆದ ಉದ್ಘಾಟನಾ ಸಮಾರಂಭವನ್ನು ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಶ್ರೀ ನಾಗರಾಜ ಬಾಳಿಕೆ ನೆರವೇರಿಸಿದರು. ಸಮಾರಂಭದಲ್ಲಿ ಕರಾಡ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಎಡಪ್ಪಾಡಿ, ಶ್ರೀ A.G. ಶರ್ಮಾ ಕೋಳಿಕ್ಕಜೆ ಹಾಗೂ ಶ್ರೀ ಜಯದೇವ ಬರೆಕೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ರೋಚಕವಾಗಿ ನಡೆದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಶ್ರೀ ಸಂದೀಪ್ ಶಿರಂತಡ್ಕ ಮಾಲೀಕತ್ವದ Coastline Karada, Mangaluru ತಂಡ ಪ್ರಥಮ ಸ್ಥಾನ ಪಡೆದರೆ, ಕುಮಾರ ನರಸಿಂಹ ಮಾಲೀಕತ್ವದ Feather Forces, Nidpalli ತಂಡ ದ್ವಿತೀಯ ಸ್ಥಾನ ಪಡೆಯಿತು.

ಈ ಬಾರಿಯ ಟೂರ್ನಿಯ ವಿಶೇಷ ಆಕರ್ಷಣೆಯಾಗಿದ್ದು Under–17 ವಿಭಾಗದ ಮಕ್ಕಳ ಆಟ. ಐದಾರು ಮಕ್ಕಳು ಹಿರಿಯ ಆಟಗಾರರಿಗೂ ಸವಾಲೊಡ್ಡುವಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅವರಲ್ಲಿರುವ ಕ್ರೀಡಾ ಪ್ರತಿಭೆ ಹಾಗೂ ಭವಿಷ್ಯದ ಭರವಸೆಯನ್ನು ತೋರಿಸಿತು.

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀ ಶಿವಶಂಕರ್ ಕನ್ನಡ್ಕ ಹಾಗೂ ಡಾ. ಮನು ಕೆದುಕೋಡಿ ಮಾತನಾಡಿದರು. ಶ್ರೀ ಪ್ರತಾಪ್ ಮಾಣಿಮೂಲೆ ಬಹುಮಾನಗಳನ್ನು ವಿತರಿಸಿದರು.

ಒಟ್ಟಾರೆಯಾಗಿ, ಕ್ರೀಡಾ ಸ್ಫೂರ್ತಿ, ಉತ್ಸಾಹ ಮತ್ತು ಸೌಹಾರ್ದತೆಯಿಂದ ಕೂಡಿದ ಈ ಪಂದ್ಯಾವಳಿ ಎಲ್ಲರ ಮನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಾಯಿತು.

ಈ ಪಂದ್ಯಾವಳಿಗೆ ಸಹಕಾರ ನೀಡಿದ ದಾನಿಗಳು, ಊಟ–ಉಪಾಹಾರದ ವ್ಯವಸ್ಥೆ ಮಾಡಿದವರು ಹಾಗೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು.

– ಅಧ್ಯಕ್ಷರು ಹಾಗೂ ಸದಸ್ಯರು
ಶ್ರೀ ಶಂಕರ ಸದನ ಕ್ರೀಡಾ ಸಮಿತಿ, ಪೆರ್ಲ

Sports
SSBL Season–3 ಟೂರ್ನಿ ಯಶಸ್ವಿ ಸಮಾಪ್ತಿ