Karada Vishwa

Event · May 6, 2025

ಕರಾಡ ವಿಶ್ವ ವೆಬಿನಾರ್ ಸರಣಿ -25

ದಿನಾಂಕ : 10/05/2025ರ ಶನಿವಾರ ಸಂಜೆ 7.30 ; ವಿಷಯ : ಶಾಲೆಯಲ್ಲಿ ಕಲಿಸದ ಪಾಠಗಳು ; ಸಂಪನ್ಮೂಲ ವ್ಯಕ್ತಿ : ಶ್ರೀಯುತ ವಿಶ್ವ ಕುಮಾರ್ ಕಾಯರ್ಗದ್ದೆ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 10/05/2025ರ ಶನಿವಾರ ಸಂಜೆ 7.30ಕ್ಕೆ ಶಾಲೆಯಲ್ಲಿ ಕಲಿಸದ ಪಾಠಗಳು ಎನ್ನುವ ವಿಷಯದ ಕುರಿತು ಶ್ರೀಯುತ ವಿಶ್ವ ಕುಮಾರ್ ಕಾಯರ್ಗದ್ದೆ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/jwo-yvyb-etc


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

* ಕನ್ನಡ ಪಂಡಿತರಾದ ವಿದ್ವಾನ್ ಕಾಯರ್ಗದ್ದೆ ಸುಬ್ರಹ್ಮಣ್ಯ ಭಟ್ಟ - ಸರಸ್ವತಿ ದಂಪತಿಯ ಪುತ್ರ.

* ಪ್ರಾಥಮಿಕ ಶಿಕ್ಷಣ ಕಾಟುಕುಕ್ಕೆ ಶಾಲೆಯಲ್ಲಿ, ಹೈಸ್ಕೂಲು ಶಿಕ್ಷಣ ಪೆರ್ಲ ಶಾಲೆಯಲ್ಲಿ, ಪಿಯೂಸಿ ಶಿಕ್ಷಣ ಪುತ್ತೂರಿನಲ್ಲಿ, ಬಿಎಸ್ಸಿ ಪದವಿಯನ್ನು ಮೈಸೂರಿನ RCE ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

* ನೆದರ್ಲ್ಯಾಂಡ್ಸ್'ನ Eindhoven University of Technologyಯಿಂದ Ph.D. ಪದವಿ ಪಡೆದಿದ್ದಾರೆ.

* ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ME in ECE ಪದವಿ ಪಡೆದಿದ್ದಾರೆ.

* ಶ್ರೀಯುತರು ಮೂರು ದಶಕಗಳಿಗಿಂತ ಅಧಿಕ ಅನುಭವ ಇರುವ ತಂತ್ರಜ್ಞಾನ ಉದ್ಯಮಿ (Technology Entrepreneur).

* ಹಲವಾರು ಅಪರೂಪದ, ಅಂತಾರಾಷ್ಟ್ರೀಯ ಸಂಶೋಧನಾ ಪೇಟೆಂಟುಗಳು ಇವರ/ಸಂಸ್ಥೆಯ ಹೆಸರಿನಲ್ಲಿ ಇವೆ.

* ತಂತ್ರಜ್ಞಾನ ಮತ್ತು ಆವಿಷ್ಕಾರದ ಕುರಿತಾದ ಹಲವಾರು ಸಂಶೋಧನಾ ಬರಹಗಳು ಮತ್ತು ಲೇಖನಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

* ದೇಶದ ಮೊದಲ video streaming IP company ಎಂಬ ಹೆಗ್ಗಳಿಕೆಗೆ ಪಾತ್ರವಾದ Smart Yantra Technologies ಎನ್ನುವ ಸಂಸ್ಥೆಯ ಆಗಿನ ಯೋಜನಾ ಮುಖ್ಯಸ್ಥರಾಗಿದ್ದರು. ಶ್ರೀಯುತರು ಈ ಸಂಸ್ಥೆಯ ಸಹ ಸಂಸ್ಥಾಪಕರು.

* Saankya Lab Private Limited ಸಂ‌ಸ್ಥೆಯ ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO). ಇದು Semiconductor ICs,‌ Systems for 5G Wireless, Broadcast & Sattelite Communication ವಿಭಾಗದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ.

* ಈ ಸಂಸ್ಥೆಯನ್ನು ಇತ್ತೀಚೆಗೆ ಟಾಟಾ ಸಮೂಹದ Tejas Network ಸಂ‌ಸ್ಥೆಯು ಸ್ವಾಧೀನಪಡಿಸಿಕೊಂಡಿತು.

* 'ವಿಶ್ವಣ್ಣ' ಕೊಡುಗೈ ದಾನಿ,‌ ಮಿತಭಾಷಿ, ಹಸನ್ಮುಖಿ ಮತ್ತು ಜನಸೇವಾ ಚಾರಿಟೇಬಲ್ ಟ್ರಸ್ಟಿನ ಆಜೀವ ಸದಸ್ಯರು.

* ಬೆಂಗಳೂರು ನಿವಾಸಿ. ಪತ್ನಿ ಶ್ರೀಮತಿ ಚೇತನಾ (ಭಗವದ್ಗೀತಾ ಶಿಕ್ಷಕಿ ಮತ್ತು ಗೃಹಿಣಿ), ಮಗ ಚಿನ್ಮಯ್ (ವಿದೇಶದಲ್ಲಿ ಉನ್ನತ ವ್ಯಾಸಂಗದ ಜೊತೆ ಉದ್ಯೋಗ), ಮಗಳು ತೇಜಸ್ವಿನಿ (ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ).

Webinar
ಕರಾಡ ವಿಶ್ವ ವೆಬಿನಾರ್ ಸರಣಿ -25