Karada Vishwa

Article · August 21, 2026

ವರಮಹಾಲಕ್ಷ್ಮಿ ಭಕ್ತಿಗೀತೆ

By ಗಾಯತ್ರಿ ಕೆ ನಾಗರಾಜ

ಗಾಯತ್ರಿ ಕೆ ಅಡ್ಕತೊಟ್ಟಿ

ಕನಕಪ್ರಭೆ ಕಾರುಣ್ಯಮೂರ್ತಿ
ಮಾಡುವೆ ಭಕ್ತಿಯೊಳು ನಿನ್ನ ಸ್ತುತಿ

ಕಲ್ಯಾಣಿ ಕರುಣಾಳು ಭವಭಯಹಾರಿಣಿ
ಕಟಾಕ್ಷದೃಷ್ಟಿಯಲಿ ಕಷ್ಟ ಪರಿಹರಿಸು ರಾಣಿ

ಕಾಂಚನಾಂಬರ ಧಾರಿಣಿ ಕಲ್ಮಶ ನಾಶಿನಿ
ಕಮನೀಯ ರೂಪಿಣಿ ಕರಸ್ಥಕಲಶ ಧಾರಿಣಿ

ರತ್ನಾಂಗಿ ಸುಂದರಿ ಕಮಲಾಕ್ಷಿ ದೇವಿ
ರತ್ನಮಾಲಾದಿ ಶೋಭಿತೆ ಪಾಲಿಸು ಪದವಿ

ಕ್ಷೀರಸಾಗರಜಾತೆ ಕೀರ್ತಿದಾಯಿನಿ ಮಾತೆ
ಕಂಕಣ ಭೂಷಿತೆ ವಾಂಛಿತಪ್ರದಾತೆ

ಕರ್ತವ್ಯಪ್ರೇರಿಕೆ ಶುಭಪ್ರದಾಯಿಕೆ
ಕಾಮದಾಯಿನಿ ದೇವಿ ಸಿದ್ಧಿದಾಯಕಿ

ಧನಕನಕಪ್ರವಾಹಿಣಿ ದುಃಖಾಪಹಾರಿಣಿ
ಕ್ಲೇಶವಿನಾಶಕಾರಿಣಿ ಮಂದಾಕಿನೀ

ಗೀತ ವಾದ್ಯಪ್ರಿಯೆ ವರಮಹಾಲಕ್ಷ್ಮಿಯೇ
ಸಿದ್ಧಿದಾತ್ರಿ ಅಭಯೆ ಕಾಪಾಡು ತಾಯೇ

Creative Writings