
News · April 13, 2026
ನ್ಯಾಷನಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ (U17) ಸನ್ನಿಧಿ ಭಟ್ ಸಾಧನೆ..
ರಾಷ್ಟ್ರಮಟ್ಟದ ಈ ಸಾಧನೆಗೆ ವಿಶೇಷ ಅಭಿನಂದನೆಗಳು.
ನಾರಂಪಾಡಿಯ ಸನ್ನಿಧಿ ಭಟ್ (ರಾಮಕೃಷ್ಣ ಭಟ್ ಮತ್ತು ನಾಗಲಕ್ಷ್ಮಿ ಅವರ ಪುತ್ರಿ) ಅವರು ಅಹಮದಾಬಾದ್, ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ನ್ಯಾಷನಲ್ U17 ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ರಾಷ್ಟ್ರಮಟ್ಟದ ಸಾಧನೆ ಅವರ ಪರಿಶ್ರಮ, ಏಕಾಗ್ರತೆ ಮತ್ತು ಪ್ರತಿಭೆಯ ಪ್ರತಿಬಿಂಬವಾಗಿದ್ದು, ನಮ್ಮ ಕರಾಡ ಸಮುದಾಯಕ್ಕೆ ಹೆಮ್ಮೆಯ ಸಂಗತಿ.
ಕರಾಡ ವಿಶ್ವದಿಂದ ಸನ್ನಿಧಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಯಶಸ್ಸಿನ ಹಿಂದೆ ಪ್ರಮುಖ ಶಕ್ತಿಯಾಗಿರುವ ಅವರ ತರಬೇತುದಾರರಿಗೆ ಹಾಗೂ ಹೆತ್ತವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಹಾರೈಕೆಗಳು.

SportsWomenAchievers
