Karada Vishwa

News · September 7, 2026

ಕರಾಡ ವಿಶ್ವ – ವಿವಾಹ ವೇದಿಕೆ: ಗೂಗಲ್ ಮೀಟ್ ಸಮಾಲೋಚನಾ ಸಭೆಯ ವರದಿ

- ಕರಾಡ ವಿಶ್ವ ತಂಡ

ಕರಾಡ ವಿಶ್ವದ ವಿವಾಹ ವೇದಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ 2026ರ ಸೆಪ್ಟೆಂಬರ್ 6ರಂದು ಗೂಗಲ್ ಮೀಟ್ ಮೂಲಕ ಸಮಾಲೋಚನಾ ಸಭೆ ನಡೆಯಿತು. ವಿವಿಧ ಸ್ಥಳೀಯ ಕರಾಡ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸ್ವಯಂಸೇವಕರು, ಸಮಾಜದ ಹಿರಿಯರು ಹಾಗೂ ಕರಾಡ ವಿಶ್ವ ತಂಡದ ಸದಸ್ಯರು ಸೇರಿದಂತೆ 32 ಮಂದಿ ಭಾಗವಹಿಸಿದರು.

ಸಭೆಯಲ್ಲಿ ಕರಾಡ ವಿಶ್ವದ ಬೆಳವಣಿಗೆ, 5,300ಕ್ಕೂ ಹೆಚ್ಚಿನ ಸದಸ್ಯರ ಅಡ್ರೆಸ್‌ಬುಕ್ ಹಾಗೂ 144 ಅಭ್ಯರ್ಥಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿವಾಹ ವೇದಿಕೆಯ ಪ್ರಗತಿಯ ಕುರಿತು ಮಾಹಿತಿ ನೀಡಲಾಯಿತು. ವಿವಾಹ ವೇದಿಕೆಯ ಬೆಂಬಲ ತಂಡದ ಜವಾಬ್ದಾರಿಯನ್ನು ಸ್ವಯಂಸೇವಕರಾಗಿ ವಹಿಸಿಕೊಳ್ಳಲು ಮುಂದೆ ಬಂದಿರುವ ಶ್ರೀಮತಿ ಶುಭಾ ನಡುಮನೆ (ಮೈಸೂರು) ಅವರನ್ನು ಅಭಿನಂದಿಸಲಾಯಿತು.

ಚರ್ಚೆಯ ವೇಳೆ ವಿವಾಹಗಳು 26–30 ವರ್ಷಗಳ ನಂತರಕ್ಕೆ ಮುಂದೂಡಲ್ಪಡುತ್ತಿರುವುದು, ಹೆಚ್ಚುತ್ತಿರುವ ನಿರೀಕ್ಷೆಗಳು, ನಗರ ಜೀವನಶೈಲಿಯ ಪ್ರಭಾವ, ಕೆಲವು ಪೋಷಕರ ಮಾರ್ಗದರ್ಶನದ ಕೊರತೆ ಮುಂತಾದ ಸವಾಲುಗಳು ಪ್ರಸ್ತಾಪವಾದವು.

ಸದಸ್ಯರು ನೀಡಿದ ಪ್ರಮುಖ ಸಲಹೆಗಳು:

  • 25–30 ವರ್ಷದ ಯುವಕ–ಯುವತಿಯರೊಂದಿಗೆ ಸಮಾಜದ ಅರ್ಹ ಹಾಗೂ ಅನುಭವಿ ವ್ಯಕ್ತಿಗಳ ನೇರ ಸಂವಾದ ಏರ್ಪಡಿಸಿ, ಅವರಲ್ಲಿರುವ ಗೊಂದಲಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

  • ಇತ್ತೀಚೆಗೆ ವಿವಾಹವಾದ ಯಶಸ್ವಿ ದಂಪತಿಗಳ ಅನುಭವ ಹಂಚಿಕೆ ಕಾರ್ಯಕ್ರಮಗಳನ್ನು ಆಯೋಜಿಸುವುದು.

  • ವಿವಾಹಪೂರ್ವ ಮಾರ್ಗದರ್ಶನ ಮತ್ತು ಕೌನ್ಸೆಲಿಂಗ್ ವ್ಯವಸ್ಥೆ ರೂಪಿಸುವುದು.

  • ಸ್ಥಳೀಯ ಸಂಘಗಳ ಅಧ್ಯಕ್ಷರು, ಸಮುದಾಯದ ಮುಖಂಡರು ಹಾಗೂ ಸಮಾಜಸೇವಕರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳಿಸುವುದು.

ಸಭೆಯಲ್ಲಿ ನಡೆದ ಚರ್ಚೆಗಳು ಫಲಪ್ರದವಾಗಿದ್ದು, ವಿವಾಹ ವೇದಿಕೆಯನ್ನು ಸಮಾಜದ ಯುವಜನರಿಗೆ ಮಾರ್ಗದರ್ಶನ ನೀಡುವ ಸಮಗ್ರ ವೇದಿಕೆಯಾಗಿ ಬೆಳೆಸುವ ಸಂಕಲ್ಪ ವ್ಯಕ್ತವಾಯಿತು.

ಮುಂದಿನ ಕಾರ್ಯಯೋಜನೆ ರೂಪಿಸಲು ಇನ್ನೆರಡು ವಾರಗಳಲ್ಲಿ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಯಿತು.

– ಕರಾಡ ವಿಶ್ವ ತಂಡ

Community
ಕರಾಡ ವಿಶ್ವ – ವಿವಾಹ ವೇದಿಕೆ: ಗೂಗಲ್ ಮೀಟ್ ಸಮಾಲೋಚನಾ ಸಭೆಯ ವರದಿ