Karada Vishwa

News · February 28, 2025

ಅರಳುತ್ತಿರುವ ಪ್ರತಿಭೆ ಶ್ರಾವ್ಯ ಕೆಮ್ಮಣಬಳ್ಳಿ

ನಮ್ಮವಳೇ.....ಕರಾಡ ಕುಟುಂಬದ ಇನ್ನೊಬ್ಬ ಮಗಳು ರಂಗ ಪ್ರವೇಶಕ್ಕೆ ಸಜ್ಜಾಗಿದ್ದಾಳೆ ಎಂದರೆ ಕರಾಡ ಸಮಾಜಕ್ಕೆ ಇನ್ನೊಂದು ಪ್ರತಿಭಾ ಗರಿ...

ಕುಮಾರಿ ಶ್ರಾವ್ಯ ಕೆಮ್ಮಣಬಳ್ಳಿ ಅರಳುತ್ತಿರುವ ಪ್ರತಿಭೆ, ಕೆಮ್ಮಣಬಳ್ಳಿ ಕೇಶವ ಭಟ್ ಮತ್ತು ಸ್ಮಿತಾ ದಂಪತಿಯ ಪುತ್ರಿ. ನಮ್ಮ ಹೆಮ್ಮೆ...ಕೆಲವೇ ಕೆಲವು ಭರತನಾಟ್ಯ ಪ್ರವೀಣೀಯರ ಜೊತೆಗೆ ನಮ್ಮ ಸಮಾಜಕ್ಕೆ ಇನ್ನೊಂದು ಗರಿ. ಇಂಥಹ ಕಲಾ ಕರ್ಮಿಗಳನ್ನು, ತಪಸ್ವಿಗಳನ್ನು ಪೋಷಿಸುವುದು ನಮ್ಮ ಸಮಾಜದ ಜವಾಬ್ದಾರಿ.

ಇವರು ಡಾ. ದ್ವಾರಿತ ವಿಶ್ವನಾಥ ಇವರ ಶಿಷ್ಯೆ, ಪ್ರಸ್ತುತ ಸುರನಾ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ವ್ಯಾಸಂಗ, ಇವರ ನಾಳಿನ ರಂಗಪ್ರವೇಶ ಯಶಸ್ವಿಯಾಗಲಿ ಎಂದು ಹಾರೈಸುತ್ತಾ, ಬೆಂಗಳೂರಿನ ಕರಾಡ ಬಾಂಧವರು ಕರಾಡೋತ್ಸವ ಸಂಭ್ರಮದೊಂದಿಗೆ ಜೆ ಎಸ್ ಎಸ್ ರಂಗಮಂದಿರ, ಜಯನಗರ 8th ಬ್ಲಾಕ್, ಬೆಂಗಳೂರು ಸಾಯಂಕಾಲ 5.30 ರಿಂದ ನಡೆಯುವ ರಂಗಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿ ನಮ್ಮ ಸಮಾಜದ ಪ್ರತಿಭೆಯೊಬ್ಬಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸೋಣ ಎಂಬ ಆಶಯದೊಂದಿಗೆ ....

ಯುವ ಕರಾಡ ಬಳಗ, ಬೆಂಗಳೂರು

ArtWomen
ಅರಳುತ್ತಿರುವ ಪ್ರತಿಭೆ ಶ್ರಾವ್ಯ ಕೆಮ್ಮಣಬಳ್ಳಿ