
Article · September 15, 2026
ಸ್ನಾನ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
'ಬಾಣಂತಿ ಸ್ನಾನ ಮುಗಿಸಿ ಹೊರ ಬಂದೆ'
ಎಂದನವನು ಗುಟ್ಟಿನಲ್ಲಿ
ಮದುವೆಯಾದದ್ದೇ ಗೊತ್ತಾಗಲಿಲ್ಲ
ಎಂದೆ ನಾ ಸಿಟ್ಟಿನಲ್ಲಿ
ನಸುನಕ್ಕು ನುಡಿದನಾತ
ಸ್ನಾನ ಮಾಡಿಸಿದ್ದು
ಕರು ಹಾಕಿದ ಹಸುವನ್ನು ಹಟ್ಟಿಯಲ್ಲಿ!
Creative Writings
