Karada Vishwa

Article · November 18, 2026

ಹಾವಳಿ ಮುಕ್ತ ದೀಪಾವಳಿ

By ಶಾರದಾ ಕಜೆಗದ್ದೆ

ಶಾರದಾ ಕಜಕದ್ದೆ

ಪ್ರಕೃತಿಪೂರಕ ಆಚರಣೆ ಹಬ್ಬಗಳ ಸಂಭ್ರಮ ಸಡಗರದ ಉದ್ದೇಶವಾಗಲಿ ಎಂಬ ಎಚ್ಚರಿಕೆ.

ಕಾರ್ತಿಕ ಮಾಸದ ದೀಪಾವಳಿ ಹಣತೆ ಸಾಲುಗಳ, ಗೂಡುದೀಪಗಳ, ಸಿಡಿಮದ್ದುಗಳ ಹಬ್ಬ. ಜೊತೆಗೆ ಸ್ನಾನದ ಹಂಡೆ ಪೂಜೆ, ಗೋಪೂಜೆ, ಲಕ್ಷ್ಮೀಪೂಜೆ, ಅಂಗಡಿಪೂಜೆ, ತುಳಸೀ ಪೂಜೆ, ಬಲಿಯೇಂದ್ರ ಪೂಜೆ ಹೀಗೆ ಪೂಜೆಗಳ ಸರತಿ ಸಾಲು. ಅದರಲ್ಲೂ ಹನ್ನೆರಡು ದಿನಗಳ ತುಳಸಿಪೂಜೆಯು ದ್ವಾದಶಿಯಂದು ಉತ್ಥಾನಗೊಳ್ಳುತ್ತದೆ.

ಹೀಗೆ ಶರದೃತುವಿನ ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಮೊದಲ್ಗೊಂಡು ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿವರೆಗೆ ಅಂದರೆ ಸುಮಾರು ಅರ್ಧ ತಿಂಗಳು ಪೂರ್ತಿ ದೀಪಾವಳಿಯ ಹೆಸರಲ್ಲಿ ಹೆಚ್ಚಿನವರೆಲ್ಲರ ಮನೆಗಳಲ್ಲಿ ಪಟಾಕಿ ಸದ್ದು ಮಾಡುತ್ತಿರುತ್ತದೆ. ಇಂದಿನ ಪಟಾಕಿಗಳ ಸದ್ದು ಅತ್ಯಂತ ತೀವ್ರತರನಾದದ್ದು ಮತ್ತು ಹೊರಸೂಸುವ ಹೊಗೆ ವಿಷಕಾರಿ. ಅದಾಗಲೇ ಕಾರ್ಖಾನೆಗಳು, ವಾಹನಗಳು ಅತಿಹೆಚ್ಚಿನ ಶಬ್ದ ಮತ್ತು ವಾಯುಮಾಲಿನ್ಯವನ್ನು ಉಂಟುಮಾಡುತ್ತಿವೆ. ಅದರ ಜೊತೆಗೆ ಹಬ್ಬಗಳ ಸಡಗರ ಸಂಭ್ರಮವನ್ನು ಪ್ರದರ್ಶಿಸಲು ಅನಗತ್ಯವಾಗಿ ಸುಡುಮದ್ದುಗಳನ್ನು ಸುಟ್ಟು ನಮ್ಮ ವಾತಾವರಣವನ್ನು ಇನ್ನಷ್ಟು ಕಲುಷಿತಗೊಳಿಸುವುದು ಎಷ್ಟು ಸರಿ ಎಂದು ಯೋಚಿಸಿ ನಮ್ಮ ಸಂಪಾದನೆಯ ದುಂದುವೆಚ್ಚವನ್ನು ಕಡಿತಗೊಳಿಸಬಹುದು.

ಇಷ್ಟು ಸಾಲದೆಂಬಂತೆ ಬೆಳಗುವ ಹಣತೆಗಳಿಗೆ ಹಾಕುವ ಎಣ್ಣೆ ಕಲಬೆರಕೆಯದ್ದು. ಅಂದರೆ ಇಂದು ನಾವು ಮಾರುಕಟ್ಟೆಯಿಂದ ಕೊಳ್ಳುವ ಯಾವುದೇ ಬ್ರಾಂಡ್ ನ ಎಳ್ಳೆಣ್ಣೆ , ತೆಂಗಿನೆಣ್ಣೆ ಅಥವಾ ಯಾವುದೇ refined oil 100% ಕಲಬೆರಕೆ. ಅಂಥ ಅಪರಿಶುದ್ಧ ತೈಲದಿಂದ ಬೆಳಗಿದ ದೀಪ ಹೊರಸೂಸುವ ಕಣ್ಣಿಗೆ ಕಾಣದ ಸೂಕ್ಷ್ಮ ಹೊಗೆ ಶ್ವಾಸಕೋಶಕ್ಕೆ ಖಂಡಿತ ಹಾನಿಕರ. ಅದನ್ನು ಮೈಪೂರ್ತಿ ಹಚ್ಚಿಕೊಂಡು ಮಾಡಿದ ಅಭ್ಯಂಜನದಿಂದ ಅದೆಂಥ ಆರೋಗ್ಯಪೂರ್ಣ ತ್ವಚೆಯನ್ನು ಪಡೆದೇವೊ ಆ ನರಕಾಸುರನೆ ಬಲ್ಲ.

ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಪರಿಸರ ಸಂರಕ್ಷಣೆ ಜೊತೆ ನಮ್ಮ ಆರೋಗ್ಯವನ್ನು ಕಾಪಾಡುವ ಮೂಲ ಉದ್ದೇಶದೊಂದಿಗೆ ಮುಂಬರುವ ಎಲ್ಲಾ ಹಬ್ಬಗಳನ್ನು ಆಚರಿಸುವ ಧ್ಯೇಯ ನಮ್ಮೆಲ್ಲರದಾಗಲಿ.

Creative Writings