
News · September 8, 2026
ಶಿರಸಿಯಲ್ಲಿ ಶ್ರಾವಣ ಮಾಸದ ಕುಂಕುಮಾರ್ಚನೆ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮ ಸಂಪನ್ನ
ವರದಿ : ಪ್ರದೇಶ ಕರ್ಹಾಡೆ ಸಮಾಜ (ರಿ) ಸಿರ್ಸಿ
ದಿನಾಂಕ 6.9 2026 ಭಾನುವಾರ ಕೋಡನಕಟ್ಟೆಯ ಶ್ರೀ ಅರುಣಾಂಬಿಕ ಮತ್ತು ಗಣಪತಿ ದೇವಸ್ಥಾನದಲ್ಲಿ ಪ್ರದೇಶ ಕರಾಡ ಸಮಾಜ (ರಿ) ಸಿರ್ಸಿ ಇಂದ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಕುಂಕುಮಾರ್ಚನೆ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮ ಸಂಪನ್ನಗೊಂಡಿತು, ನಮ್ಮ ಸಮಾಜದ ಭಗಿನಿಯರ ಜೊತೆ ಆ ಭಾಗದ ಬ್ರಾಹ್ಮಣ ಭಗಿನಿಯರ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಧ್ಯಾಹ್ನ ಪ್ರಸಾದ ಭೋಜನದ ನಂತರ ಸೇವಾ ರೂಪದಲ್ಲಿ ಸಿರ್ಸಿ ಲಯನ್ಸ್ ಕ್ಲಬ್ ವನಿತೆಯರು ಸುಶ್ರಾವ್ಯವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಂಕುಮಾರ್ಚನೆಯ ಪೌರೋಹಿತ್ಯವನ್ನು ಶ್ರೀಮತಿ ಪ್ರತಿಭಾ ದೇವ ಬೆಳಲೆ ಇವರು ವಹಿಸಿದ್ದರು.
ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ವಿನಾಯಕ್ ರಿಂಗ್, ದತ್ತಾತ್ರೇಯ ನಾಡಿಗ್, ಕುಟುಂಬದವರು ವಹಿಸಿದ್ದರು,
ದೇವಸ್ಥಾನದ ಅಧ್ಯಕ್ಷರಾದ ಶಿವರಾಂ ಹೆಗಡೆ ಕಂಚಿ ಹಾಗೂ ಕಾರ್ಯದರ್ಶಿಗಳಾದ ಮನೋಹರ ಹಾಗೂ ಪದಾಧಿಕಾರಿಗಳು ನಮ್ಮೊಂದಿಗಿದ್ದು ಸಹಕಾರ ಕೊಟ್ಟಿರುತ್ತಾರೆ.
ಅವರಿಗೆ ನಮ್ಮ ಸಮಾಜದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು 💐
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಗಜಾನನ ರಾವ್ ಡೊಂಗ್ರೆ, ಗೌರವಾಧ್ಯಕ್ಷರಾದ ರವಿ ಕಾನೇಟ್ಕರ್, ಸಮಾಜದ ಹಿರಿಯರಾದ ಉದಯ್ ಸ್ವಾದಿಯವರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ ಪ್ರತಿಭಾ ದೇವ ಅವರಿಗೆ ಸಮಾಜದ ಪರವಾಗಿ ಧನ್ಯವಾದಗಳು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವನಿತೆಯರಿಗೂ , ಸಮಾಜ ಬಾಂಧವರಿಗೂ, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
- ಪ್ರದೇಶ ಕರಾಡ ಸಮಾಜ (ರಿ) ಸಿರ್ಸಿ




