
Article · June 8, 2026
ಮುಕ್ತ.....
- ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ
ಮುಸ್ಸಂಜೆ ವೇಳೆಯಲಿ ಇಂಚರದ ದನಿಯಲ್ಲಿ
ಸಂಚಾರಕಿಹುದೊಂದು ಮುಕ್ತದಾರೀ... /
ತಂಪು ಗಾಳಿಯು ಬೀಸಿ, ಸುಮದ ಘಮ ಸುತ್ತಡರಿ
ಸಂಚಾರಕಿಹುದೊಂದು ಮುಕ್ತದಾರೀ...../
ಸುರಿಸುರಿವ ಮಳೆಯಲ್ಲಿ ನೆಂದು ನಡೆಯುವ ಹಾದಿ,
ಸಂಚಾರಕಿಹುದೊಂದು ಮುಕ್ತ ದಾರೀ...
ಸರಸರನೆ ನಡೆದಿರಲು ಗೊರವಂಕಗಳ ಹಿಂಡು,
ಸಂಚಾರಕಿಹುದೊಂದು ಮುಕ್ತ ದಾರೀ...../
ಸುತ್ತಮುತ್ತಲ ಹಸಿರು, ತಣ್ಣನೆಯ ಆ ಗಾಳಿ,
ಬೀಸಿ ಸಂಚಾರಕೇ ಮುಕ್ತದಾರೀ...../
ಪ್ರಕೃತಿ ಆಹ್ವಾನಿಸಿದೆ ತಂಪು ನೆರಳನು ನೀಡಿ,
ಸಂಚಾರಕಿದೆ ಇಲ್ಲಿ ಮುಕ್ತದಾರೀ....../
ಚಂದನದ ವನದಿಂದ ಮನವ ತಟ್ಟುವ ಗಂಧ,
ಹರಡಿ ಪಸರಿಸುತಿಹುದು ತಂಪು ಗಾಳೀ..../
ನಡುನಡುವೆ ಹಾಸಿರುವ ತರಗೆಲೆಯು ಹಾದಿಯಲಿ
ಚೆಲ್ಲಿ ಸಂಚಾರಕೇ ಮುಕ್ತದಾರೀ....../
Creative Writings
