Karada Vishwa

Article · November 18, 2026

ಸಂಭ್ರಮ

By ಸಂಧ್ಯಾ ಕೊರೆಕ್ಕಾನ

ಸಂಧ್ಯಾ ಕೊರೆಕ್ಕಾನ

ಲಂಗದಾವಣಿ ತೊಟ್ಟು ಅಂಗಳದಿ ಆಡುತಿಹ
ಮುಂಗುರುಳು ಹಾರಾಡೊ ಬಾಲೆಯನು ನೋಡು
ಕಂಗಳಲಿ ತುಂಬಿರುವ ಕಾಂತಿಯನು ಹೊರಸೂಸಿ
ಸಂಗಡಿಗರೊಂದೀಗೆ ಕುಣಿಯುತಿಹಳು

ಮುಗುಳುನಗೆ ತೋರುವಳು ಕಣ್ಣಮುಚ್ಚಾಲೆಯಲಿ
ಗಗನದಲಿ ಹೊಳೆವಂಥ ಚುಕ್ಕಿ ತಾರೆಯದು
ಚಿಗರೆಯಂತೋಡುವಳು ಎರಡುಜಡೆ ಹೆಣೆದಿಹಳು
ನಗುಮೊಗದಿ ನಲಿದಾಡೊ ಬಾಲೆಯಿವಳು

ಕರದಲ್ಲಿ ವರ್ಣಬಳೆ ಕಿವಿಯಲ್ಲಿ ಲೋಲಾಕು
ಕೊರಳಲ್ಲಿ ಮುತ್ತು ಮಣಿ ಧರಿಸಿರುವ ಬಾಲೆ
ಧರಿಸಿರುವ ದಿರುಸಲ್ಲು ಬಣ್ಣಬಣ್ಣದ ಚಿತ್ರ
ಬಿರಿದ ಮಲ್ಲಿಗೆಹೂವ ದಳಗಳಂತೆ

ಪುಟ್ಟ ಕಂಗಳಬಾಲೆ ಕಾಲಲ್ಲಿ ಕಿರುಗೆಜ್ಜೆ
ತೊಟ್ಟಿಹಳು ಹಣೆಯಲ್ಲಿ ಶ್ರೀಗಂಧವನ್ನು
ಉಟ್ಟಿಹಳು ಪಟ್ಟೆ ಪೀತಾಂಬರ ದಾವಣಿಯು
ಹುಟ್ಟುಹಬ್ಬದ ದಿನದ ಸಂಭ್ರಮದಲಿ

Creative Writings