
Article · September 19, 2026
ನನ್ನಾಕೆ
By ಜಯರಾಮ ಶಿರಂತಡ್ಕ
ಜಯರಾಮ ಶಿರಂತಡ್ಕ
ಅವಳ ಕಣ್ಣುಗಳ ಅಕ್ಕರೆಯ ಮಹಾಪೂರದಲಿ ಮಿಂದೇಳುವಾ ಬಯಕೆ,
ದೇವಲೋಕದ ಅಪ್ಸರೆಗಿಂತ ಮೇಲು ಇವಳೆನ್ನಲು ಬೇರೆ ಸಾಕ್ಷಿ ಬೇಕೇ ?
ಜನುಮ ಸಾರ್ಥಕ್ಯದ ಕ್ಷಣಗಳ ವಿವರಿಸಲು ಈ ಸಾಲುಗಳು ಸಾಕೇ,
ಇವಳು ಅನುದಿನ ಜತೆ ಇರುವಾಗ ಬೇರೆ ಸ್ವರ್ಗದ ಮಾತೇಕೆ?
Creative Writings
