Karada Vishwa

Article · August 16, 2026

ಬಡವರ ಪಾಲಿನ "ಸಂಧ್ಯಾ ಕಾಲೇಜುಗಳು"....

By ಪ್ರವೀಣ,ಪೊಸವಳ್ಯ ಬೆಲ್ಲ

ಪ್ರವೀಣ ಪಿ. ಬಿ.

ಬಡವರ ಪಾಲಿನ"ಲರ್ನಿಂಗ್ ಮತ್ತು ಅರ್ನಿಂಗ್"ಹಾಗೂ ಸಂಧ್ಯಾ ಕಾಲೇಜುಗಳು

ನಾಲ್ಕು ದಶಕಗಳ ಹಿಂದೆ ಕಾಲೇಜು ಶಿಕ್ಷಣ ಪಡೆಯುವುದೇ ಸವಾಲಾಗಿತ್ತು ಎಂದು ಹಿರಿಯರಿಂದ ಕೇಳಿ ತಿಳಿದಿದ್ದೇವೆ.ಅಂದು ನಗರಗಳಿಗೆ ಸೀಮಿತವಾದ ಕಾಲೇಜುಗಳು ಆರ್ಥಿಕವಾಗಿ ಸ್ಥಿತಿವಂತರಿಗೆ ಮಾತ್ರ ಶಿಕ್ಷಣ ದೊರಕುತಿತ್ತು.ಹಾಸ್ಟೆಲ್ ವ್ಯವಸ್ಥೆ ಕೂಡಾ ಇಲ್ಲದ ಸ್ಥಿತಿಯಲ್ಲಿ ನಗರದ ವಿದ್ಯಾರ್ಥಿಗಳಿಗೆ ಹೊರತಾಗಿ ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಸಾಧ್ಯವಾಗುತ್ತಿರಲಿಲ್ಲ.

ವರುಷಗಳುರುಳಿದಂತೆ ಸರ್ಕಾರಿ, ಖಾಸಗಿ ಕಾಲೇಜುಗಳು, ಅದೇ ರೀತಿ ಇಂದು ಪ್ರತಿ ತಾಲೂಕಿನಲ್ಲಿಯೇ ಕನಿಷ್ಟ ೨೫ ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯಾಚರಿಸುತ್ತಿರುವುದರೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಕೇಂದ್ರಗಳಾಗಿವೆ. ಅದೇ ರೀತಿ ಸದ್ದಿಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ ಸಂಧ್ಯಾ ಕಾಲೇಜುಗಳು ಬಡ ವಿದ್ಯಾರ್ಥಿಗಳಿಗೆ ವರದಾನವಾಗಿವೆ ಎಂದರೆ ತಪ್ಪಾಗಲಾರದು. ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ತಮ್ಮ ಸ್ವಂತ ದುಡಿಮೆಯಿಂದ ಶಿಕ್ಷಣ ಪಡೆಯಬೇಕು ಎಂಬ ಹಂಬಲದಿಂದ ದಿನದ ಅವಧಿಯಲ್ಲಿ ಕೆಲಸಕ್ಕೆ ಸೇರಿ ಸಂಧ್ಯಾ ಕಾಲದಲ್ಲಿ (ಸಂಜೆ ೫ - ರಾತ್ರಿ ೯ ಗಂಟೆ) ಕಾರ್ಯ ನಿರ್ವಹಿಸುವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದವರು ಉನ್ನತ ಉದ್ಯೋಗದಲ್ಲಿದ್ದಾರೆ ಎಂದು ಗಮನಿಸಬಹುದು. ಅವರಿಗೆ ಶಿಕ್ಷಣದ ಅವಧಿಯಲ್ಲಿಯೇ ಸಂಪಾದನೆ- ಕಲಿಕೆಯ ಸಮತೋಲನ ತಿಳಿದಿರುವುದರಿಂದ ಉದ್ಯೋಗ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುತ್ತಾರೆ.

ಮಂಗಳೂರಿನಂತಹ ನಗರಗಳಲ್ಲಿ ಪಿ‌.ಯು.,ಪದವಿ,ಹಾಗೂ ಎಂ.ಬಿ.ಎ ಯಂತಹ ಕಾಲೇಜುಗಳು ಸಂಧ್ಯಾ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.ಇಲ್ಲಿ ಪ್ರವೇಶಾತಿ ಪಡೆದ ಅನೇಕರು ದಿನದ ಅವಧಿಯಲ್ಲಿ ಟೆಕ್ನಿಕಲ್, ಕ್ಲರ್ಕ್, ಸೇಲ್ಸ್, ಮಾರ್ಕೆಟಿಂಗ್,ಮುಂತಾದ ಉದ್ಯೋಗ ಮಾಡಿ ತಿಂಗಳಿಗೆ ಹದಿನೈದು ಸಾವಿರ ಸಂಪಾದಿಸಿ , ಸಂಧ್ಯಾ ಕಾಲೇಜಿನಲ್ಲಿ ಶಿಕ್ಷಣ ಪಡೆದು ಉತ್ತಮ ಉದ್ಯೋಗವನ್ನು ಪಡೆಯುತ್ತಾರೆ. ಇತ್ತೀಚಿಗಿನ ವರ್ಷಗಳಿಂದ ವಿ.ವಿ ಕಾಲೇಜಿನಲ್ಲಿ ಎಂ.ಬಿ.ಎ. (ಇಂಟರ್ನಾಶನಲ್ ಬಿಸ್ನೆಸ್ ) ಸ್ನಾತಕೋತ್ತರ ಪದವಿಯು ಅರ್ನಿಂಗ್ -ಲರ್ನಿಂಗ್ ಮಾಡುವವರಿಗೆ ಪೂರಕವಾಗಿ ಇದು ಉನ್ನತ ಉದ್ಯೋಗಕ್ಕೂ ದಾರಿ ದೀಪ ಎನ್ನಬಹುದು ಹಾಗೂ ಇತರರಿಗೆ ಮಾದರಿಯಾಗಬಹುದು. ಒಟ್ಟಿನಲ್ಲಿ ಹೇಳುವುದಾದರೆ ಸಂಧ್ಯಾ ಕಾಲೇಜುಗಳು ಬಡವರ ಪಾಲಿಗೆ ದಾರಿ ದೀಪ ಎಂದರೆ ತಪ್ಪಾಗಲಾರದು.

Creative Writings
ಬಡವರ ಪಾಲಿನ "ಸಂಧ್ಯಾ ಕಾಲೇಜುಗಳು"....