Karada Vishwa

Article · June 29, 2026

ಸೋರುವಾ ಮಾಡಿನಡಿ.....

--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ಸೋರುವಾ ಮಾಡಿನಡಿ ಸೇರುತಿದ್ದವು ಅಂದು ,

ಒಲವು ತುಂಬಿದ ಹಲವು ಹಲವು ಮನಸು

ಸೋರಿದಾ ನೀರನೇ ಸಾಕ್ಷಿಯಾಗಿರಿಸುತಲಿ

ಕಟ್ಟಿಕೊಂಡವು ಮನದಿ ನೂರು ಕನಸು.../

ಸೋರಿ ಹೋಗುವ ಮೊದಲು ಭಾವನೆಯ ತುಂಬಿಟ್ಟು

ಹಂಚಿಕೊಳ್ಳುತ, ಪ್ರೀತಿ, ಸ್ನೇಹ, ಒಲವು

ಕೊಂಚವೂ ಸೋಲದೆಯೆ ಹಿರಿಯರಾಶೀರ್ವಾದದಲಿ,

ಗೆಲುವಿನೆಡೆಗಡಿ ಇಟ್ಟು ನಡೆವ ಛಲವು.../

Creative Writings