Karada Vishwa

Article · September 14, 2026

ಗೌರಿ ಹಬ್ಬದ ತಯಾರಿಯಲ್ಲೇ ಒಂದು ಸೊಬಗು…

ನಳಿನಿ ಸೈಪಂಗಲ್ಲು

ಸಂಪ್ರದಾಯವನ್ನು ಪಾಲಿಸುವ ಕರಾಡ ಸಮುದಾಯದ ಮನೆಗಳಲ್ಲಿ ಗೌರಿ ಹಬ್ಬದ ತಯಾರಿ ಎಂದರೆ ಅದೇ ಒಂದು ಸಂಭ್ರಮ. ಅದರಲ್ಲೂ ಹುತ್ತದ ಮಣ್ಣನ್ನು ತಂದು, ಅದನ್ನು ಹದವಾಗಿ ನಾದಿಸಿ, ಅದರಿಂದ ಗೌರಿ–ಗಣೇಶರ ಮೂರ್ತಿಗಳನ್ನು ತಯಾರಿಸುವ ಸಡಗರವೇ ವಿಶೇಷ.

ಪೇಟೆಯಲ್ಲಿ ಸಿದ್ಧವಾಗಿ ಸಿಗುವ ಬಣ್ಣಬಣ್ಣದ ಬೊಂಬೆಗಳಲ್ಲ… ದೇವರ ನಾಮಗಳನ್ನು ಗುಣುಗುಣಿಸುತ್ತಾ, ಮೆತ್ತನೆಯ ಮಣ್ಣನ್ನು ಕೈಯಲ್ಲಿ ಉಂಡೆಗಳನ್ನಾಗಿ ಮಾಡಿ, ಮನಸ್ಸಿನಲ್ಲಿ ಮೂಡಿದ ದೇವರ ರೂಪಕ್ಕೆ ಜೀವ ತುಂಬುವ ಈ ಕೆಲಸ ಅಷ್ಟು ಸಣ್ಣದಲ್ಲ. ಅದರೊಳಗೆ ಭಕ್ತಿ ಇದೆ, ಶ್ರದ್ಧೆ ಇದೆ, ಕಲೆಯಿದೆ… ಜೊತೆಗೆ ತಲೆತಲಾಂತರಗಳಿಂದ ಬಂದ ಸಂಪ್ರದಾಯದ ಸೊಗಸೂ ಇದೆ.

ವರ್ಷಕ್ಕೊಮ್ಮೆ ಬರುವ ಈ ಹಬ್ಬಕ್ಕಾಗಿ ತನು–ಮನಗಳಿಂದ ತಯಾರಿ ನಡೆಸುವ ನಮ್ಮ ಮಹಿಳೆಯರ ಈ ಸಡಗರ, ಶ್ರಮ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಯೂ ಇದೇ ಉತ್ಸಾಹದಿಂದ ಮುಂದುವರಿಸುವುದೇ?

ಕಾದು ನೋಡಬೇಕಾಗಿದೆ…

Heritage