
Event · March 4, 2025
ಕರಾಡ ವಿಶ್ವ ವೆಬಿನಾರ್ ಸರಣಿ -21
ದಿನಾಂಕ : 8-3-2025ರ ಶನಿವಾರ ಸಂಜೆ 7.30ಕ್ಕೆ ; ಸಂಪನ್ಮೂಲ ವ್ಯಕ್ತಿ : ಶ್ರಿಯುತ ಮೋಹನ ಭಟ್ ಬಟ್ಯಮೂಲೆ ವಿಷಯ : ಆಧುನಿಕತೆಯ ಗುಂಗಿನಲ್ಲಿ ನಮ್ಮಿಂದ ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಸಂರಕ್ಷಣೆ ಸಾಧ್ಯವೇ? ಸಾಧ್ಯವಿದ್ದಲ್ಲಿ ಹೇಗೆ??
ಈ ಸರಣಿ ಕಾರ್ಯಕ್ರಮದ ಅಂಗವಾಗಿ 08/03/2025ರ ಶನಿವಾರ ಸಂಜೆ 7.30ಕ್ಕೆ ಆಧುನಿಕತೆಯ ಗುಂಗಿನಲ್ಲಿ ನಮ್ಮಿಂದ ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಸಂರಕ್ಷಣೆ ಸಾಧ್ಯವೇ? ಸಾಧ್ಯವಿದ್ದಲ್ಲಿ ಹೇಗೆ?? ಎನ್ನುವ ವಿಷಯದ ಕುರಿತು ಶ್ರಿಯುತ ಮೋಹನ ಭಟ್ ಬಟ್ಯಮೂಲೆ ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/txe-zsfe-oda
ಕಾರ್ಯಕ್ರಮ ನಿರ್ವಹಣೆ ಮತ್ತು ಸ್ವಾಗತ: ಶ್ರೀ ರವೀ ಸಜಂಗದ್ದೆ
ಪ್ರಾರ್ಥನೆ : ಕುಮಾರಿ ಭುವಿ ಸಜಂಗದ್ದೆ
ನಿತ್ಯ ಪಂಚಾಂಗ: ಶ್ರೀ ನಾಗರಾಜ ಉಪ್ಪಂಗಳ
ಸಂಪನ್ಮೂಲ ವ್ಯಕ್ತಿ ಪರಿಚಯ: ಶ್ರೀ ರವೀ ಸಜಂಗದ್ದೆ
ವಿಷಯ ಮಂಡನೆ, ಸಂವಾದ : ಶ್ರೀ ಮೋಹನ ಭಟ್ ಬಟ್ಯಮೂಲೆ
ಕರಾಡ ವಿಶ್ವ ಕುರಿತು : ಶ್ರೀ ಸತ್ಯ ಶಂಕರ ಬೇಂದ್ರೋಡು
ಧನ್ಯವಾದ : ಶ್ರೀ ಸುಬ್ರಹ್ಮಣ್ಯ ಭಟ್ ಕುದ್ಕುಳಿ
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ಇವರ ನಿಜ ನಾಮಧೇಯ ಶ್ರೀಕೃಷ್ಣ ಭಟ್ ಬಟ್ಯಮೂಲೆ. ಎಲ್ಲರೂ ಮೋಹನ ಎಂದೇ ಕರೆದು ಅಭ್ಯಾಸವಾಗಿ ಮೋಹನ ಭಟ್ ಬಟ್ಯಮೂಲೆ ಎಂದೇ ಚಿರಪರಿಚಿತರು.
* ಬಟ್ಯಮೂಲೆ ಅಚ್ಯುತ ಭಟ್- ರತ್ನಾವತಿ ದಂಪತಿಗಳ ಕೊನೆಯ ಮಗ.
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಾಣಾಜೆಯ ಆರ್ಲಪದವು ಶಾಲೆಯಲ್ಲಿ. ಬಳಿಕ ತಮಿಳುನಾಡಿನ ಕೊಯಮತ್ತೂರು ಮತ್ತು ಕಾಂಚೀಪುರಂನಲ್ಲಿ ವೇದಾಭ್ಯಾಸ ಮಾಡುತ್ತಾ ಪಾಠಶಾಲೆಯ ಬಿಡುವಿನ ವೇಳೆಲ್ಲಿ ಚೆನ್ನೈಯ ಮೈಲಾಪುರ ಸಂಸ್ಕೃತ ಕಾಲೇಜಿನ ವತಿಯಿಂದ ನಡೆಸುತ್ತಿದ್ದ ಹಲವು ಸಂಸ್ಕೃತ ವಿಷಯಗಳನ್ನು ಅಭ್ಯಸಿಸಿ ಪ್ರಾಕ್ ಶಿರೋಮಣಿ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ.
* ಮುಂದೆ ಬಡಕ್ಕೇಕರೆ ಗೋವಿಂದ ಭಟ್ಟರಲ್ಲಿ ಕೇರಳೀಯ ತಂತ್ರಶಾಸ್ತ್ರ ಅಧ್ಯಯನ. ತೀರ್ಥರೂಪರಾದ ಬಟ್ಯಮೂಲೆ ಅಚ್ಯುತ ಭಟ್ಟರ ಪೌರೋಹಿತ್ಯ ಮನೆತನದ ಜವಾಬ್ದಾರಿಯನ್ನು ಮುಂದುವರೆಸುತ್ತಿದ್ದಾರೆ.
* ನೆಚ್ಚಿನ ಹವ್ಯಾಸ ಕೃಷಿ ಚಟುವಟಿಕೆ ಮತ್ತು ಶೈಕ್ಷಣಿಕ ವಿಷಯ - ಊರಿನ ಒಂದೆರಡು ಸರಕಾರಿ ಶಾಲೆ + ಗ್ರಾಮೀಣ ಅನುದಾನಿತ ಶಾಲೆಗಳ ಆಡಳಿತ ಮಂಡಳಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
* 'ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು' ಎಂಬ ಸದಾಶಯದೊಂದಿಗೆ ತನ್ನ ಸಂಪಾದನೆಯ ಒಂದಂಶವನ್ನು ಅದಕ್ಕಾಗಿ ವಿನಿಯೋಗಿಸುತ್ತಿದ್ದಾರೆ.
* ಪತ್ನಿ ಶ್ರೀಮತಿ ಲತಾ, ಮಕ್ಕಳು ಅನಿರುದ್ಧ, ಅರ್ಚನಾ, ವಂದನಾ ಇರುವ ಸಂತೃಪ್ತ ಕುಟುಂಬ.
