Karada Vishwa

Article · October 29, 2025

ಜನನಾಯಕ

ಕವಯಿತ್ರಿ : ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .

[ಆಧುನಿಕ ಪುಣ್ಯಕೋಟಿ ]
 

ಧರಣಿ ಮಂಡಲ ಮಧ್ಯದೊಳಗೆ, 
ಭರತ ಖಂಡದ ದೆಹಲಿಯೊಳಗೆ, 
'ಮೋದಿ ' ಎನ್ನುವ ಧೀರ ನಾಯಕ-
-ನವನ ಕಥೆಯನು ಹೇಳುವೇ ' ||

 

ದೇಶ ಸೇವೆಯೆ ಉಸಿರು ಎಂದಾ 

ಮೋದಿಗೆ ಜಯವಾಗಲೀ |

ಸಂಘಕೂ ಜಯವಾಗಲೀ | 

ಗುಜರಾತ್ ಎನ್ನುವ ರಾಜ್ಯದಲ್ಲಿ, 
ಬಡ ಕುಟುಂಬದಿ ಜನಿಸಿದವನೂ, 
ಚಹಾ ಮಾರುತ ಬೆಳೆದು ಬಂದೂ, 
ದೇಶ ನಾಯಕನಾದನೂ ||
 
ಸಂಘ ಪರಿವಾರ ದಲಿ ಗುರುತಿಸಿ 
ಸಂಘ ಶಕ್ತಿಯ ಬೆಳೆಸಿಕೊಂಡೂ 
ಸತ್ಯ ಮಾಗ೯ದಿ ನಡೆದು ಬಂದವ, 
ನ್ಯಾಯನಿಷ್ಟುರವಾದಿಯೂ II

ಸಂಘಕೇ ಜಯವಾಗಲೀ....

ದೇಶಭಕ್ತಿಯ ಬೆಳೆಸಿಕೊಂಡೂ 
ಜನರಿಗೊಳಿತನು ಮಾಡಿಕೊಂಡೂ, 
ಹಲವು ಹೋರಾಟದಲಿ ಭಾಗಿಯು 
ಆಗಿ ಜನಮನ ಗೆದ್ದನೂ||

ಮೋದಿಗೇ ಜಯವಾಗಲೀ...


ಗೆದ್ದು ಬಂದು ಚುನಾವಣೆಯಲೀ 
ಪಟ್ಟವೇರುತ ದೆಹಲಿಯಲ್ಲೀ,
ಪ್ರಧಾನಿಯಾದನು "ಭರತಖಂಡಕೆ,"
ಪಡೆದು 'ಭಲೇ ' ಜನ ಮೆಚ್ಚುಗೇ||

ಶಕ್ತಿ ತುಂಬಿದ ಸೈನ್ಯದೊಳಗೇ 
'ದೇಶರಕ್ಷಣೆ ಕಾರ್ಯದೊಳಗೇ
ಸುತ್ತ ದೇಶದ ಗಡಿಗಳಲ್ಲೇ
ದಿಟ್ಟ ಸೈನ್ಯವ ಬೆಳೆಸಿದಾ||

ಸೈನ್ಯಕೂ ಜಯವಾಗಲೀ....

ರಾಮ ರಾಜ್ಯವ ಧರೆಗೆ ತಂದಾ
ಕಪ್ಪು ಹಣವನು ಬಯಲಿಗೆಳೆದಾ,
ದಿಟ್ಟ ಧೀರೋದಾತ್ತ ನಡೆಯದು,
ರಾಮಮಂದಿರ ನಿರ್ಮಿಸೇ ||

ದೈವಭಕ್ತನು ನಮ್ಮ ಮೋದಿ, 
ದೇಶಭಕ್ತನು ನಮ್ಮ ಮೋದಿ, 
ಸತ್ಯ ನಿಷ್ಟನು ನಮ್ಮ ಮೋದೀ,
ಮಾತೃ ಭಕ್ತನು ಮೋದಿಯೂ ||

"ಅಮಿತ ' 'ಭುಜಬಲ ಇವನಿಗಿಹುದೂ,
" ನಿರ್ಮಲದ 'ಆ ಮನಸು ಇಹುದೂ
ಜ್ಞಾನದಲು ಮುಂಚೂಣಿಯಲ್ಲಿಹ
ಸತತವೂ ಶ್ರಮ ವಹಿಸುವಾ ||

ದೇಶಕಾಗಿ ಸಂಸಾರ ತೊರೆದಾ,
ದೇಶಕಾಗಿ ಗೆದ್ದುಬಂದಾ,    
ದೇಶ ಸೇವೆಯ ಮಾಡಿಕೊಂಡೂ 
ಜನರ ಮನದಲಿ ನೆಲೆಸಿದಾ!

ದೇಶ ಸೇವೆಯೆ ಉಸಿರು ಎಂದಾ, 
ಮೋದಿಗೇ ಜಯವಾಗಲೀ
ಮೋದಿಯನು ಈ ತರದಿ ಬೆಳೆಸಿದ
ಸಂಘಕೂ ಜಯವಾಗಲೀ ||

🙏🙏🙏🙏

Creative Writings
ಜನನಾಯಕ