
Article · July 8, 2026
ಕರಾಡರ ಹೆಮ್ಮೆಯ ಗಿರೀಶಣ್ಣನಿಗೆ ನುಡಿನಮನ ಮಾಲೆ
--- ನಮ್ಮೆಲ್ಲರನ್ನಗಲಿದ ಪದ್ಮಶ್ರೀ , ತೂಗುಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜರಿಗೆ ಕರಾಡ ಸಂಘಗಳಿಂದ, ಕರಾಡ ಸಮುದಾಯದ ವ್ಯಕ್ತಿಗಳಿಂದ ನುಡಿನಮನ ಮಾಲೆ ...
ಕರಾಡ ಬ್ರಾಹ್ಮಣ ಸಮಾಜದ ಶೋಕಸಂದೇಶ
ಪದ್ಮಶ್ರೀ ಪುರಸ್ಕೃತ, ತೂಗು ಸೇತುವೆಗಳ ಸರದಾರ ಶ್ರೀ ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ಕರಾಡ ಬ್ರಾಹ್ಮಣ ಸಮಾಜದ ಸಮಸ್ತ ಬಂಧು-ಭಗಿನಿಯರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಶ್ರೀ ಗಿರೀಶ್ ಭಾರದ್ವಾಜ್ ಅವರು ಅತ್ಯಂತ ಸರಳ, ಸಜ್ಜನ, ವಿನಯಶೀಲ ಹಾಗೂ ಸಹೃದಯ ವ್ಯಕ್ತಿಯಾಗಿದ್ದರು. ತಮ್ಮ ಇಂಜಿನಿಯರಿಂಗ್ ವೃತ್ತಿಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಜನಮಾನಸದಲ್ಲಿ ಅಳಿಯದ ಛಾಪು ಮೂಡಿಸಿದ ಅಪರೂಪದ ಸಾಧಕರಾಗಿದ್ದರು. ಹಳ್ಳಿಗಾಡಿನ ಹಿನ್ನೆಲೆಯಿಂದ ಬೆಳೆದು, ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ.
ಅವರ ಜೀವನ, ಸಾಧನೆ ಮತ್ತು ವ್ಯಕ್ತಿತ್ವ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಿರುತ್ತದೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು, ಸ್ನೇಹಪರತೆಯಿಂದ ನಡೆದುಕೊಳ್ಳುತ್ತಿದ್ದ ಅವರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದರು.
ಅವರ ಅಗಲಿಕೆ ಕರಾಡ ಬ್ರಾಹ್ಮಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಂದರ್ಭದಲ್ಲಿ ಕರಾಡ ಬ್ರಾಹ್ಮಣ ಸಮಾಜದ ಪರವಾಗಿ ಅವರ ಕುಟುಂಬದ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ಸಲ್ಲಿಸುತ್ತೇವೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಪರಮಾತ್ಮನು ದಿವಂಗತ ಶ್ರೀ ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ.
ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ್ ಅವರಿಗೆ ಕರಾಡ ಬ್ರಾಹ್ಮಣ ಸಮಾಜದ ಗೌರವಪೂರ್ಣ, ಕಂಬನಿಮಿಡಿದ ಶ್ರದ್ಧಾಂಜಲಿಗಳು.
- - ಕರಾಡ ಬ್ರಾಹ್ಮಣ ಸಮಾಜ (ರಿ) ಬೆಂಗಳೂರು
ಓಂ ಶಾಂತಿ...🙏
ದೇಶಕ್ಕೆ ಹಾಗೂ ಸಮಾಜಕ್ಕೆ, ತುಂಬ ಲಾರದ ನಷ್ಟ,
ಗೌರವಪೂರ್ಣ ಶ್ರದ್ಧಾಂಜಲಿಗಳು,
-- ಪ್ರದೇಶ ಕರಾಡ ಸಮಾಜ (ರಿ) ಸಿರ್ಸಿ
ಗಿರೀಶಣ್ಣನ ಪವಿತ್ರ ಆತ್ಮಕ್ಕೆ ವಿಷ್ಣುಸಾಹಿತ್ಯ ಪ್ರಾಪ್ತಿಯಾಗಲಿ ಎಂಬುದೊಂದೆ ಕರಾಡ ಸಮಾಜ ಮಂಗಳೂರಿನ ಸಮಸ್ತ ಬಂಧುಗಳ ಹೃದಯದ ಪ್ರಾರ್ಥನೆ🙏
ಈ ಪವಿತ್ರ ಭೂಮಿಯಲ್ಲಿ ನಮಗಾಗಿ ಮತ್ತೊಮ್ಮೆ ಹುಟ್ಟಿ ಬನ್ನಿ ಗಿರೀಶಣ್ಣ.
--ಕರಾಡ ಸಮಾಜ ಮಂಗಳೂರು
ಕರಾಡ ಸುವರ್ಣ ಸಂಭ್ರಮ ಸಮಿತಿ -2026 ಇದರ ಓರ್ವ ಗೌರವಾಧ್ಯಕ್ಷರಾದ ಪದ್ಮಶ್ರೀ ಗಿರೀಶ ಭಾರದ್ವಾಜ ಇವರು ಇಂದು ಬೆಳಗ್ಗೆ ನಿಧನ ಹೊಂದಿದರು. ತೂಗು ಸೇತುವೆ ನಿರ್ಮಾಣ ಮೊದಲಾದ ಜನೋಪಯೋಗಿ ಕಾರ್ಯ ಗಳಿಂದ ಪ್ರಸಿದ್ಧಿ ಪಡೆದ ಶ್ರೀ ಗಿರೀಶ ಭಾರದ್ವಾಜ ಅವರು ನಮ್ಮ ಸಮಾಜಕ್ಕೆ ಒಂದು ಹೆಮ್ಮೆ. ಇವರ ಅಗಲುವಿಕೆಯು ಕರಾಡ ಸಮಾಜಕ್ಕೆ ತುಂಬಲಾರದ ನಷ್ಟ. ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ .
-- ಅಧ್ಯಕ್ಷರು ಮತ್ತು ಸದಸ್ಯರು, ಕರಾಡ ಸುವರ್ಣ ಸಂಭ್ರಮ ಸಮಿತಿ- 2026
ಆತ್ಮೀಯ ಬಂಧು ಪದ್ಮಶ್ರೀ ಗಿರೀಶ ಭಾರದ್ವಾಜರ ನಿಧನ ಅತೀವ ದುಃಖವನ್ನು ತಂದಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ.
--ಕೋಟೆ ರಾಮ ಭಟ್ಟ ಕಾರ್ಕಳ
ತೂಗು ಸೇತುವೆ ಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರು ದೇವರ ಪಾದ ಸೇರಿದರು. ಹೌದು.. ಕರಾಡ ಬ್ರಾಹ್ಮಣ ಸಮಾಜಕ್ಕೆ ತುಂಬಲಾರದ ನಷ್ಟ. ಶ್ರೀ ಶಂಕರ ಸದನ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಿ ಜನ ಮೆಚ್ಚುಗೆ ಗಳಿಸಿದ ಗಿರೀಶಣ್ಣ ನಮ್ಮ ಸಮಾಜಕ್ಕೆ ಹೆಮ್ಮೆ. ಸರಳ ವ್ಯಕ್ತಿತ್ವದ ಗಿರೀಶಣ್ಣ ದೇಶದಲ್ಲಿ ತೂಗು ಸೇತುವೆಗಳ ಮೂಲಕ ಮನೆ ಮಾತಾಗಿದ್ದರು. ಅವರ ಆತ್ಮಕ್ಕೆ ಶ್ರೀ ದೇವರು ಸದ್ಗತಿ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂಬುದೇ ಈ ಹೊತ್ತಿನ ಪ್ರಾರ್ಥನೆ..
✍🏼ವಿಘ್ನೇಶ ಶಿರಂತಡ್ಕ
