News · May 10, 2025
ಹಾರ್ದಿಕ ಅಭಿನಂದನೆಗಳು ಡಾ| ಪ್ರಫುಲ್ಲ ಕೆ.ವಿ. ಅವರಿಗೆ
'ಯಕ್ಷಗಾನದ ಅಧ್ಯಯನಗಳು – ತಾತ್ವಿಕ ಸ್ವರೂಪ' ಎಂಬ ಮಹತ್ವಪೂರ್ಣ ವಿಷಯದಡಿಯಲ್ಲಿ ಪ್ರಬಂಧ ಮಂಡಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಶ್ರೇಣಿಯಲ್ಲಿ ಡಾಕ್ಟರೇಟ್ (Ph.D.) ಪದವಿಯನ್ನು ಪಡೆದು, ನಮ್ಮ ಸಮುದಾಯದ ಹೆಮ್ಮೆಯ ತಾರೆ ಎಂಬ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಸಾಧನೆಗೆ ವಯಸ್ಸೂ ಅಡ್ಡಿಯಾಗದು, ಸಂಸಾರ ಜವಾಬ್ದಾರಿಯೂ ಅಡ್ಡಿಯಾಗದು ಎಂಬುದನ್ನು ನಿಜವಾಗಿ ಸಾಬೀತುಪಡಿಸಿದ್ದಾರೆ ಶ್ರೀಮತಿ ಪ್ರಫುಲ್ಲ ಕೆ.ವಿ. ಅವರು.
'ಯಕ್ಷಗಾನದ ಅಧ್ಯಯನಗಳು – ತಾತ್ವಿಕ ಸ್ವರೂಪ' ಎಂಬ ಮಹತ್ವಪೂರ್ಣ ವಿಷಯದಡಿಯಲ್ಲಿ ಪ್ರಬಂಧ ಮಂಡಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಶ್ರೇಣಿಯಲ್ಲಿ ಡಾಕ್ಟರೇಟ್ (Ph.D.) ಪದವಿಯನ್ನು ಪಡೆದು, ನಮ್ಮ ಸಮುದಾಯದ ಹೆಮ್ಮೆಯ ತಾರೆ ಎಂಬ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಡಾ. ಉದಯಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಮಹತ್ತರ ಸಾಧನೆ ಸಾಧ್ಯವಾಯಿತಾದರೆ, ಪ್ರಫುಲ್ಲ ಅವರ ಖುದ್ದಿನ ಪರಿಶ್ರಮ, ನಿಷ್ಠೆ ಹಾಗೂ ಕಲೆಯೆಡೆಗೆ ತೋರಿದ ಆಸಕ್ತಿಯ ಫಲವೇ ಇದು.
ಶ್ರೀ ಗಣಪತಿ ಭಟ್ ಕುಂಡೇಲು ಅವರ ಧರ್ಮಪತ್ನಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ, ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. 'ಹಿಮಪಾತದ ಹನಿಗಳು' ಎಂಬ ಕವನ ಸಂಕಲನವು ಇವರ ಸೃಜನಶೀಲ ಮನಸ್ಸಿನ ಪ್ರತಿಫಲವಾಗಿದೆ.
ಇಂತಹ ಉಜ್ವಲ ಸಾಧನೆಗೆ ಕರಾಡ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ಇವರಿಂದ ಇನ್ನೂ ಇಂತಹವೇ ಪ್ರೇರಣಾದಾಯಕ ಸಾಧನೆಗಳು ಮುಂದುವರಿಯಲಿ ಎಂಬುದೇ ನಮ್ಮೆಲ್ಲರ ಹಾರೈಕೆ.