Karada Vishwa

Article · August 25, 2026

ಶತಾಯುಷಿ ಚೆರ್ಕೂಡ್ಲು ಸೀತಾರಾಮ ಭಟ್ಟರು

ಬಿ ಕೆ ಶ್ರೀರಾಮ

(2 ವರ್ಷಗಳ ಹಿಂದೆ ಚೆರ್ಕೂಡ್ಲು ಸೀತಾರಾಮ ಭಟ್ಟರ ಬಗ್ಗೆ ಬರೆದ ಬರಹ)

ಪ್ರಿಯ ಸುಮನಸುಗಳೇ,

ಇಂದು 2024 ರ ಎರಡನೇ ದಿನ. ಇಂದಿನ ವಿಶೇಷತೆ ಅಂದರೆ ಚೇರ್ಕೂಡ್ಲು ಸೀತಾರಾಮ ಭಟ್ಟರ ನೂರನೇ ಜನ್ಮದಿನ. ಮೊನ್ನೆ ಡಿಸೆಂಬರ್ 30 ರಂದು ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆ. ಆರೋಗ್ಯವಾಗಿದ್ದಾರೆ. ಚುರುಕಾಗಿದ್ದು ಎದ್ದು ಸ್ವತಂತ್ರವಾಗಿ ನಡೆದಾಡುತ್ತಾರೆ. ನೆನಪಿನ ಶಕ್ತಿ ಅದ್ಭುತವಾಗಿದೆ. ಶ್ರೀಯುತರು ನಮ್ಮ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಪ್ರಥಮ ಉಪಾಧ್ಯಕ್ಷರು.1978 ರ ಸಾಲಿನ ಅಧ್ಯಕ್ಷರು.ಸಾಹಸಿ. ಅಂದಿನ ಕಾಲದಲ್ಲಿ ಕಿರ್ಲೋಸ್ಕರ್ ಕಂಪನಿಯಲ್ಲಿ ಹದಿನಾರು ವರ್ಷ ದುಡಿದವರು. ಮುಂದುವರಿಯುತ್ತಿದ್ದರೆ ದೊಡ್ಡ ಹುದ್ದೆಯಲ್ಲಿ ವಿರಮಿಸಬಹುದಿತ್ತು. ಅಷ್ಟು ವಿದ್ಯಾಭ್ಯಾಸದ ಅರ್ಹತೆಯೂ ಇತ್ತು. ಸ್ವತಂತ್ರ ಮನೋಭಾವದ ಶ್ರೀಯುತರು ಬದಿಯಡ್ಕದಲ್ಲಿ ಎಣ್ಣೆ ಮಿಲ್ಲನ್ನು ಸ್ಥಾಪಿಸಿ ತಮ್ಮ ತಮ್ಮಂದಿರಿಗೆ ಸ್ವಾವಲಂಬನೆಯ ಮಾರ್ಗದರ್ಶನ ನೀಡಿದರು. ಚಿಕ್ಕ ಮಗಳು ನಯನಾರನ್ನು D Pharma ಓದಿಸಿ, ಬದಿಯಡ್ಕದಲ್ಲಿ ಫಾರ್ಮಸಿ ತೆರೆದ ಧೈರ್ಯವಂತರು. ಮಗ ನವೀನ್ ಈಗ ಫಾರ್ಮಸಿ ಯನ್ನು ಮುನ್ನಡೆಸುತ್ತಿದ್ದಾರೆ. ನವೀನ್ ಅವರ ಮಗ MBBS ಮುಗಿಸಿ MD ಯ ಕೊನೇ ಹಂತದಲ್ಲಿದ್ದಾರೆ.ತಂದೆ,ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವ ನವೀನರಿಗೆ ನಮ್ಮ ಮನಸ್ಸಿನಾಳದ ಅಭಿನಂದನೆಗಳು.

ಸೀತಾರಾಮ ಭಟ್ಟರದು ವಿಶೇಷ ವ್ಯಕ್ತಿತ್ವ. ಸ್ವಾಂತಂತ್ರ್ಯ ಪೂರ್ವದಲ್ಲಿ St.Aloysius ಕಾಲೇಜ್ ನ ಪದವೀಧರ. ನವಜೀವನ ಹೈಸ್ಕೂಲ್ ನಲ್ಲಿ ಕೆಲವು ತಿಂಗಳು ಅಧ್ಯಾಪಕ. ಪ್ರಖ್ಯಾತ ಎಂಜಿನಿಯರ್ ಬಲೆಕ್ಕಳ ಕೃಷ್ಣ ಭಟ್ಟರ ಸಂಗಡ ನಿರ್ಮಾಣ ಕ್ಷೇತ್ರದಲ್ಲೂ ದುಡಿದಿದ್ದಾರೆ. ಸ್ವಲ್ಪ ಸಮಯ demonstrator ಆಗಿಯೂ ದುಡಿದ ಅನುಭವ. ಹುಬ್ಬಳ್ಳಿಯಲ್ಲಿ ಕೈಗಾರಿಕೆ ಆರಂಭಿಸಿದ ಸಾಹಸಿ. ಕೊನೆಗೆ ಅರುವತ್ತರ ದಶಕದ ಉತ್ತರಾರ್ಧದಲ್ಲಿ ಬದಿಯಡ್ಕದಲ್ಲಿ ಭಟ್ ಅಂಡ್ ಕೋ ಸ್ಥಾಪಿಸಿ ಟೈಪಿಂಗ್ ಇನ್ಸ್ಟಿಟ್ಯೂಟ್, ಗೇರುಬೀಜ ಸಂಸ್ಕರಣೆ, ತೆಂಗಿನೆಣ್ಣೆ ಮಿಲ್ಲು ಸ್ಥಾಪಿಸಿ ವಿಜಯಿಯಾದ ಧೈರ್ಯವಂತ. ಮಾತಿನಲ್ಲಿ ಖಡಕ್. ಅಶಿಸ್ತು ಮತ್ತು ಅಸತ್ಯವನ್ನು ಎಂದಿಗೂ ಸಹಿಸರು. ಪ್ರಾಮಾಣಿಕರಿಗೆ ಬೆಣ್ಣೆಯಂತಹ ಮನಸ್ಸು.

ಶ್ರೀಯುತರ ಯಶೋಗಾಥೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಘಟನೆಗಳು.ಇಂದಿನ ಯುವಕರು ಪಾಲಿಸಬೇಕಾದ ಅಲಿಖಿತ ನಿಯಮಗಳನ್ನು ಶ್ರೀಯುತರು ಜೀವನಪೂರ್ತಿ ಸಾಧಿಸಿ ತೋರಿಸಿದ್ದಾರೆ. ನೂರನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇವರ ಆದರ್ಶಗಳನ್ನು ಮೆಲುಕು ಹಾಕುತ್ತ, ಅವುಗಳನ್ನು ಯಥಾ ಸಾಧ್ಯ ಅನುಸರಿಸುತ್ತ ಶುಭಾಶಯಗಳನ್ನು ಕೋರುತ್ತ, ಅಭಿನಂದನೆಗಳನ್ನು ಸಲ್ಲಿಸೋಣ.

ಜಾತಿ ಮುಕ್ತೇಸರ ಮನೆತನ ಚೆರ್ಕೂಡ್ಲು ಸೀತಾರಾಮ ಭಟ್ಟರಿಗೆ ಭಕ್ತಿಪೂರ್ವಕ ಪ್ರಣಾಮಗಳು.

ಬಿಕೇಶ್ರೀರಾಮ

ಉಡುಪಿ 576102

6361452706

02-01-2024

.

Creative Writings
ಶತಾಯುಷಿ ಚೆರ್ಕೂಡ್ಲು ಸೀತಾರಾಮ ಭಟ್ಟರು