
News · July 10, 2026
ಕರಾಡ ಸುವರ್ಣ ಸಂಭ್ರಮ 2026 – ಉದ್ಘಾಟನಾ ಸಮಾರಂಭಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ
ವಿವರ ಸಲ್ಲಿಸಲು ಕೊನೆಯ ದಿನಾಂಕ: 11-07-2026, ಸಂಜೆ 6:00 ಉದ್ಘಾಟನಾ ಸಮಾರಂಭ: 20-09-2026 (ಭಾನುವಾರ), ಅಗಲ್ಪಾಡಿ ಶ್ರೀ ಕ್ಷೇತ್ರ
ಆತ್ಮೀಯ ಸಮಾಜ ಬಾಂಧವರೇ
ಕರಾಡ ಸುವರ್ಣ ಸಂಭ್ರಮ 2026 ಮುಂದಿನ ಸೆಪ್ಟೆಂಬರ್ ತಿಂಗಳನಿಂದ ಡಿಸೆಂಬರ್ ವರೆಗೆ ವಲಯವಾರು ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು ತಮ್ಮ ಗಮನಕ್ಕೆ ಈಗಾಗಲೇ ಬಂದಿರಬಹುದು. ಅದರ ಉದ್ಘಾಟನಾ ಸಮಾರಂಭವು ಅಗಲ್ಪಾಡಿ ಶ್ರೀ ಕ್ಷೇತ್ರದ ಪರಿಸರದಲ್ಲಿ ದಿನಾಂಕ 20-9-2026 ಆದಿತ್ಯವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಆ ದಿನ ಸಾಂಸ್ಕೃತಿಕ ಕಾರ್ಯಕ್ರಮ ನೀಡ ಬಯಸುವ ನಮ್ಮ ಸಮಾಜದ ಕಲಾವಿದರು ವಿವರಗಳನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀ ಕೊಚ್ಚಿ ಗೋವಿಂದ ಭಟ್ ಇವರಲ್ಲಿ ದಿನಾಂಕ 11-7-2026 ಸಂಜೆ 6.00 ಗಂಟೆಯೊಳಗೆ ನೀಡಬೇಕಾಗಿ ವಿನಂತಿ,
ಸಂಪರ್ಕ ಸಂಖ್ಯೆ - 7907896063
ವಂದನೆಗಳೊಂದಿಗೆ,
ಅಧ್ಯಕ್ಷ / ಕಾರ್ಯದರ್ಶಿ
ಕರಾಡ ಸುವರ್ಣ ಸಂಭ್ರಮ ಸಮಿತಿ
ಅಗಲ್ಪಾಡಿ ವಲಯ
Community
