
Article · February 26, 2026
ಮುಕ್ತಕಗಳು
- ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ
ಅಪಹಾಸ್ಯ
ಹಣ್ಣೆಲೆಯು ಉದುರಿರಲು ಚಿಗುರೆಲೆಯು ನಗುತಿಹುದು,
ಅಪಹಾಸ್ಯವಿಹುದಲ್ಲಿ"ಬಿದ್ದೆ" ಎಂದು
ಅರಿವಿಲ್ಲವೂ ಅದಕೆ ಉದುರಿ ಹೋಗುವ ಸಮಯ
ತನ್ನ ಜೀವನದಲ್ಲು ಬರುವುದೆಂದು
ಬೇಡಿಕೆ
ತಲೆಯ ಬಾಗುತ ಬನ್ನಿ ಮದವೂರ ಗಣಪನಿಗೆ,
ಹೊಸದಾಗಿ ನಿರ್ಮಿಸಿದ ದೇಗುಲದ ಒಳಗೆ
ಭಕ್ತಿಭಾವಗಳಿಂದ ಮನದುಂಬಿ ಬೇಡಿದರೆ,
ಇಷ್ಟಾರ್ಥ ಸಿದ್ಧಿಯೂ ಕ್ಷಣಗಳೊಳಗೆ
ವ್ಯರ್ಥ
ಬದುಕೆಂಬ ಸಾಗರದಿ ಕೆದಕಿ ಹುಡುಕುವುದೇನು
ಇರಿಸಿ ಮನಸಿನ ಒಳಗೆ ಸಾವಿರವು ಕನಸು
ಹುಡುಕಾಟವೆಲ್ಲವೂ ವ್ಯರ್ಥವಾಗಲುಬಹುದು
ನೆಮ್ಮದಿಯ ಹುಡುಕಿದರೆ ಬಾಳು ಸೊಗಸು
🪻🪻🪻
Creative Writings
