
Event · June 18, 2025
ಕರಾಡ ಸುವರ್ಣ ಸಂಭ್ರಮ ಆಚರಿಸುವ ಬಗ್ಗೆ ಸಭೆ
ದಿನಾಂಕ : 29-06-2025 ಆದಿತ್ಯವಾರ ; ಸಮಯ : ಬೆಳಗ್ಗೆ 10 ಗಂಟೆ ; ಸ್ಥಳ : ಶ್ರೀ ಶಂಕರ ಸದನ ಪೆರ್ಲ
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಸುವರ್ಣ ಮಹೋತ್ಸವದ ಆಚರಣೆಯ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಲು ಎಲ್ಲಾ ವಲಯ ಸಂಘಟನೆಗಳ ಪದಾಧಿಕಾರಿಗಳ ಮತ್ತು ಸಮಾಜದ ಹಿರಿಯ, ಯುವ ಮತ್ತು ಮಹಿಳಾ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಸಮಾಜ ಬಾಂಧವರೆಲ್ಲ ಭಾಗವಹಿಸಿ ಸೂಕ್ತ ಸಲಹೆಗಳನ್ನಿತ್ತು ಸಹಕರಿಸಬೇಕಾಗಿ ವಿನಂತಿ.
- ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು , ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ.
