
Article · October 25, 2025
ದೀಪಾವಳಿ ಹಬ್ಬ
ಪುಟಾಣಿ ಕವಯಿತ್ರಿ : ಆರ್ಣಾ ಪಂಜರಿಕೆ
ಬಂತು ಬಂತು ದೀಪಾವಳಿ ಹಬ್ಬ
ಬಂತು ಬಂತು ದೀಪಾವಳಿ ಹಬ್ಬ
ಪಟಾಕಿಗಳನ್ನು ಉರಿಸುವ ಹಬ್ಬ
ದೀಪಗಳೆಲ್ಲ ಸೇರುವ ಹಬ್ಬ
ಎಣ್ಣೆಯ ಸ್ನಾನವ ಮಾಡುವ ಹಬ್ಬ
ಹೊಸ ಹೊಸ ಉಡುಪನು ಹಾಕುವ ಹಬ್ಬ
ಕತ್ತಲು ಆಯಿತು ಬೆಳಕನು ತಂದಿತು
ಇದುವೇ ನಮ್ಮಯ ಹಬ್ಬ
ಮಕ್ಕಳು ಎಲ್ಲರು ಸೇರುವ ಹಬ್ಬ
ಸಂತಸದಿಂದ ಕುಣಿಯುವ ಹಬ್ಬ
ಹೋಳಿಗೆ , ಪಾಯಸ ವಿವಿಧ ತಿಂಡಿಗಳ ಹಬ್ಬ
ವಿಧ ವಿಧ ಆಟದಿ ನಲಿಯುವ ಹಬ್ಬ
ಬಿಸಿ ಬಿಸಿ ತಿಂಡಿ ಬಿಸಿಬಿಸಿ ಊಟ
ಎಲ್ಲವನ್ನೂ ಸವಿಯುವ ಹಬ್ಬ
ಇದುವೇ ನಮ್ಮಯ ಖುಷಿಯ ಹಬ್ಬ
ಬಂತು ಬಂತು ದೀಪಾವಳಿ ಹಬ್ಬ
ಕವಯಿತ್ರಿ : ಆರ್ಣಾ ಪಿ
ವಯಸ್ಸು : 9 ವರ್ಷ

Kids
