Karada Vishwa

News · September 22, 2026

ಮಲೆತಡ್ಕ - ಶ್ರೀ ದುರ್ಗಾಪರಮೇಶ್ವರೀ ದೇವಾಲಯ ನವನಿರ್ಮಾಣದ ಪವಿತ್ರ ಸಂಕಲ್ಪ

ಆನುವಂಶಿಕ ಮೊಕ್ತೇಸರರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು - ಪಡ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನವನಿರ್ಮಾಣ ಸಮಿತಿ.

ಮುಂದಿನ 2027 ಮಾರ್ಚ್-ಎಪ್ರಿಲ್ ಅವಧಿಯಲ್ಲಿ ಸಿಂಹವಾಹಿನಿ ದುರ್ಗೆಯನ್ನು ನೂತನ ಆಲಯದೊಳಗೆ ಪ್ರತಿಷ್ಠಾಪಿಸುವುದು ನಮ್ಮೆಲ್ಲರ ಪರಮ ಲಕ್ಷ್ಯ. ಸನ್ಮನಸ್ಸುಳ್ಳ ಶ್ರದ್ಧಾಳು ಬಂಧುಗಳಾದ ತಾವೆಲ್ಲ ಪೂರ್ಣಪ್ರಮಾಣದ ಸಹಾಯ ಸಹಕಾರಗಳನ್ನಿತ್ತು ದೇವಿ ಆಲಯ ನವನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿಕೊಡಬೇಕೆಂದು ವಿನೀತವಾಗಿ ಕೇಳಿಕೊಳ್ಳುತ್ತೇವೆ.

ಪಡ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನವನಿರ್ಮಾಣ ಸಮಿತಿ, ಶ್ರೀ ಜಟಾಧಾರಿ ಮೂಲಸ್ಥಾನ, ಮಲೆತ್ತಡ್ಕ-ಸ್ವರ್ಗ ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ.

ನಮ್ಮ 'ನವನಿರ್ಮಾಣ ಸಮಿತಿ'ಯ ಗೌರವಾಧ್ಯಕ್ಷರು ಶ್ರೀಮದೆಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಶುಭಾಶೀರ್ವಾದಗಳೊಂದಿಗೆ

ಪ್ರಿಯರೇ,

ಶ್ರೀ ದೇವಿ ದುರ್ಗೆ ಮತ್ತು ಶ್ರೀ ದೈವ ಜಟಾಧಾರಿ ಪಡ್ರೆಯ ಪಾರಮಾರ್ಥಿಕ ಅಸ್ಮಿತೆಯ ಎರಡು ಪ್ರತೀಕಗಳು. ಸ್ವರ್ಗ ಸಮೀಪದ ಮಲೆತ್ತಡ್ಕ ಮೂಲಸ್ಥಾನ ಇವೆರಡೂ ಪ್ರತೀಕಗಳ ಪುಣ್ಯ ಭೂಮಿ ಎಂಬುದು ಪರಂಪರೆಯ ನಂಬಿಕೆ.

2018ರಲ್ಲಿ ಮಲೆತ್ತಡ್ಕ ಮೂಲಸ್ಥಾನದಲ್ಲಿ ಗ್ರಾಮಕ್ಕೆ ಗ್ರಾಮವೇ ಸೇರಿಕೊಂಡು ಶ್ರೀ ದೈವಕ್ಕೆ ನವೀಕೃತ ನೆಲೆಯೊಂದನ್ನು ನಿರ್ಮಿಸಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದದ್ದು ಒಂದು ಪುರೋಗಾಮಿ ಗಟ್ಟಿ ನಡೆ. ಬಹುಶತಮಾನಗಳಿಂದ ಸ್ಥಿರನೆಲೆಗಾಗಿ ಹಂಬಲಿಸುತ್ತಿದ್ದ ದೇವಿ ಚೈತನ್ಯವನ್ನು ಆ ಹೊತ್ತಿಗೆ ಕಡೆಗಣಿಸಿದ ವಿಚಾರ ಪಡ್ರೆಯ ಆರಾಧನಾ ಪರಂಪರೆಯಲ್ಲಿ ಒಂದು ಕಪ್ಪು ಅಧ್ಯಾಯ.

ಪಡ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನವನಿರ್ಮಾಣ ಸಮಿತಿಯನ್ನು ರಚಿಸಿಕೊಂಡು ಪಡ್ರೆ ಮೂಲಸ್ಥಾನದಲ್ಲಿ ದೈವಜ್ಞರ ಪ್ರಶ್ನಚಿಂತನೆಯಲ್ಲಿ ನಿರ್ದೇಶಿಸಲ್ಪಟ್ಟಂತೆ ದೇವಿ ದುರ್ಗೆಗೆ ದೇವಸ್ಥಾನ ನಿರ್ಮಿಸುವ ಸಂಕಲ್ಪ ಕಳೆದ ಮೂರು ವರ್ಷಗಳಿಂದ ಗರಿಗೆದರಿದೆ.

30-4-2025ರಂದು ಎಡನೀರು ಶ್ರೀಗಳ ಕರಕಮಲಗಳಿಂದ ಶಿಲಾನ್ಯಾಸಗೊಂಡು ಇದೀಗ ಶಿಲಾಮಯ ಗರ್ಭಗುಡಿಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಸುಮಾರು ಮೂರು ಕೋಟಿಯಷ್ಟು ಖರ್ಚು ತಗಲಬಹುದೆಂದು ಅಂದಾಜಿಸಿದ್ದು ಈಗಾಗಲೇ ಐವತ್ತು ಲಕ್ಷಕ್ಕೂ ಅಧಿಕ ವ್ಯಯ ನಡೆದಿದೆ.

ಸುತ್ತು ಗೋಪುರಗಳು ಮತ್ತು ಪ್ರಧಾನ ಗೋಪುರದ ಜತೆಯಲ್ಲಿ ಪಂಚಲೋಹದ ವಿಗ್ರಹ ರಚನಾಕಾರ್ಯಗಳನ್ನು ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ಪೂರೈಸಬೇಕಾಗಿದೆ.

ಮುಂದಿನ 2027 ಮಾರ್ಚ್-ಎಪ್ರಿಲ್ ಅವಧಿಯಲ್ಲಿ ಸಿಂಹವಾಹಿನಿ ದುರ್ಗೆಯನ್ನು ನೂತನ ಆಲಯದೊಳಗೆ ಪ್ರತಿಷ್ಠಾಪಿಸುವುದು ನಮ್ಮೆಲ್ಲರ ಪರಮ ಲಕ್ಷ್ಯ.

ಸನ್ಮನಸ್ಸುಳ್ಳ ಶ್ರದ್ಧಾಳು ಬಂಧುಗಳಾದ ತಾವೆಲ್ಲ ಪೂರ್ಣಪ್ರಮಾಣದ ಸಹಾಯ ಸಹಕಾರಗಳನ್ನಿತ್ತು ದೇವಿ ಆಲಯ ನವನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿಕೊಡಬೇಕೆಂದು ವಿನೀತವಾಗಿ ಕೇಳಿಕೊಳ್ಳುತ್ತೇವೆ.

ಶ್ರೀ ಮಾಧವ ಭಟ್, ಬೆಲ್ಲ

ಆನುವಂಶಿಕ ಮೊಕ್ತೇಸರರು

ಶ್ರೀ ಹೃಷಿಕೇಶ ಭಟ್ ವಿ. ಎಸ್.ಸ್ವರ್ಗ

ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಪಡ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ನವನಿರ್ಮಾಣ ಸಮಿತಿ.


ಪಡ್ರೆ ಮಲೆತ್ತಡ್ಕ ಮೂಲಸ್ಥಾನದಲ್ಲಿ ನವನಿರ್ಮಾಣಗೊಳ್ಳುತ್ತಿರುವ ದೇವಿ ದುರ್ಗೆಯ ಶಿಲಾಮಯ ಗರ್ಭಗುಡಿ

Temples
ಮಲೆತಡ್ಕ - ಶ್ರೀ ದುರ್ಗಾಪರಮೇಶ್ವರೀ ದೇವಾಲಯ ನವನಿರ್ಮಾಣದ ಪವಿತ್ರ ಸಂಕಲ್ಪ