
News · August 28, 2026
ಗುಂಡ್ಯಡ್ಕದಲ್ಲಿ ಋಗುಪಾಕರ್ಮ
ವರದಿ ಕೃಪೆ : ಚಂದ್ರಶೇಖರ್ ಭಟ್, ಕಟೀಲು
ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ,ಗುಂಡ್ಯಡ್ಕ, ಮೂಡಬಿದರೆ ಇಲ್ಲಿ ದಿನಾಂಕ 26.8.2026 ಬುಧವಾರ ದಂದು ಬೆಳಿಗ್ಗೆ ಸಮಾಜ ಬಾಂಧವರ ಋಗುಪಾಕರ್ಮವು ಅತ್ಯಂತ ಶ್ರಧ್ಧಾ ಭಕ್ತಿಯಿಂದ ನೆರವೇರಿತು.
ಸಂಘದ ಕೇಂದ್ರ ಕಛೇರಿಯ "ರುಕ್ಮಿಣಿ ಪಾಂಡುರಂಗ ಸಭಾಭವನ" ದಲ್ಲಿ ನಡೆದ ಈ ಕಾರ್ಯಕ್ರಮವು ಪ್ರಾತ: 6.30ಕ್ಕೆ ಸರಿಯಾಗಿ ಪ್ರಾರಂಭಗೊಂಡಿತು. ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಪರಾಡ್ಕರ್, ಎರ್ಫಲೆ ಇವರ ನೇತೃತ್ವದಲ್ಲಿ ಉಪಾಕರ್ಮ ಹೋಮದೊಂದಿಗೆ ಪ್ರಾರಂಭಗೊಂಡು, ಯಜ್ಞೋಪವೀತ ಧಾರಣೆಯನ್ನು ವಿಧಿವಿಧಾನಗಳ ಮೂಲಕ ನಡೆಸಲಾಯಿತು. ಸುಮಾರು 75 ಜನ ಸಮಾಜ ಬಾಂಧವರು ಭಾಗವಹಿಸಿದ ಈ ಕಾರ್ಯಕ್ರಮ ದಲ್ಲಿ ವೇದಮೂರ್ತಿಗಳಾದ ಶ್ರೀ ಸುಧೀರ್ ದೇವಜಿ, ಶ್ರೀಮಹಾದೇವ್ ಪರಾಡ್ಕರ್ , ಶ್ರೀ ಪ್ರಶಾಂತ್ ನಾಟೇಕರ್ ಮುಂತಾದವರು ಸಹಕರಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ನಾಟೇಕರ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ನಂತರ ವಿಠೋಬಾ ರುಕುಮಾಯಿ ದೇವರಿಗೆ ವಂದಿಸಿ ಎಲ್ಲರೂ ಉಪಹಾರವನ್ನು ಸೇವಿಸುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯ ಗೊಂಡಿತು.🙏
ವರದಿ : ಚಂದ್ರಶೇಖರ ಭಟ್,ಕಟೀಲು.
ಕಾರ್ಯದರ್ಶಿ, ಕ. ಬ್ರಾ. ಸ. ಸು. ಸಂಘ, ಗುಂಡ್ಯಡ್ಕ.


